ಕುಂಬಳೆ: ಮಂಜೇಶ್ವರ ಕ್ಷೇತ್ರದ ಶಾಸಕರ ಆಸ್ತಿ ಅಭಿವೃದ್ಧಿ ಯೋಜನೆಯಡಿ ಪುತ್ತಿಗೆ ಗ್ರಾಮ ಪಂಚಾಯತಿ ಎಡನಾಡ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕಾಗಿ ನಿರ್ಮಿಸಲಾದ ಕಟ್ಟಡವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಿದಾ ಊಜಂಪದವು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಜೆಎಸ್ ಸೋಮಶೇಖರ, ಪುತ್ತಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಇ.ಕೆ. ಮುಹಮ್ಮದ್ ಕುಂಞÂ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಜುನೈದ್ ಉರ್ಮಿ, ಗ್ರಾಮ ಪಂಚಾಯತಿ ಸದಸ್ಯೆ ಲಕ್ಷ್ಮಿ ವಿ. ಭಟ್ ಮತ್ತು ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾವ್ ಮನ್ನಿಪ್ಪಾಡಿ ಮಾತನಾಡಿದರು.


.jpg)
