ಮಂಜೇಶ್ವರ: ಇತಿಹಾಸ ಪ್ರಸಿದ್ಧ ಮಂಜೇಶ್ವರ ಕನಿಲ ಶ್ರೀ ಭಗವತಿ ಕ್ಷೇತ್ರದ ಬ್ರಹ್ಮ ಕಲಾಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಶ್ರೀಭಗವತೀ ಕ್ಷೇತ್ರದಲ್ಲಿ ಜರುಗಿತು. ಖ್ಯಾತ ಉದ್ಯಮಿ ಹಾಗೂ 'ಅಸ್ತ್ರ' ಗ್ರೂಪಿನ ಮಾಲಕ ಲಂಚುಲಾಲ್ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು.
ಕ್ಷೇತ್ರದ ಜೀರ್ಣೋದರ ಸಮಿತಿಯ ಅಧ್ಯಕ್ಷ ಪದ್ಮನಾಭ ಕಡಪರ, ಪ್ರಧಾನ ಕಾರ್ಯದರ್ಶಿ ವಕೀಲ ನವೀನ್‍ರಾಜ್ ಕಜೆ, ಕೋಶಾಧಿಕಾರಿ ಲಕ್ಷ್ಮಣ ಸಾಲಿಯಾಮ್, ಕ್ಷೇತ್ರ ಸಮಿತಿ ಅಧ್ಯಕ್ಷ ವಿಶ್ವನಾಥ ಕುದುರು, ಪ್ರಧಾನ ಕಾರ್ಯದರ್ಶಿ ದೇವದಾಸ್ ವರ್ಕಾಡಿ, ಕೋಶಾಧಿಕಾರಿ ವಿಜಯ, ಕನಿಲ ಕ್ಷೇತ್ರದ ಆಚಾರ ಪಟ್ಟವರು, ಗುರಿಕಾರರು ಉಪಸ್ಥಿತರಿದ್ದರು.



