ಸಾರ್ವಜನಿಕ ಚೌಕದಲ್ಲಿ ಸಾಮೂಹಿಕ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಸೇರಿರುವುದನ್ನು ತೋರಿಸುವ ವೀಡಿಯೊವನ್ನು ಇರಾನ್ ನ ಸರಕಾರಿ ಮಾಧ್ಯಮ ಪ್ರಸಾರ ಮಾಡಿದೆ.
ವೇದಿಕೆಯಿಂದ, ತಾನು "ಅಟೇನಾ" ಅವರ ತಾಯಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು "ಅಮೆರಿಕನ್ ಅಪರಾಧಗಳ ದಾಖಲೆ" ಎಂದು ಕೆಳ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ.
ಜನಸ್ತೋಮವು "ಅಮೆರಿಕ ನಾಶವಾಗಲಿ", "ಇಸ್ರೇಲ್ ನಾಶವಾಗಲಿ" ಮತ್ತು "ಶರಣಾಗತಿ ಇಲ್ಲ" ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ.
ಶಾಲೆಯನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಇಸ್ರೇಲ್ ಅನ್ನು ಇರಾನ್‌ನ ಸರಕಾರಿ ಮಾಧ್ಯಮ ದೂಷಿಸಿದೆ.
ಈ ಪ್ರದೇಶದಲ್ಲಿ ಯಾವುದೇ ಇಸ್ರೇಲ್ ಅಥವಾ ಯುಎಸ್ ದಾಳಿಗಳ ಬಗ್ಗೆ ನಮಗೆ ತಿಳಿದಿಲ್ಲ ಎಂದು ಇಸ್ರೇಲ್ ಮಿಲಿಟರಿ ವಕ್ತಾರರು ಇತ್ತೀಚೆಗೆ ಹೇಳಿದ್ದರು.

