HEALTH TIPS

ಇರಾಕ್ ನಲ್ಲಿ ಪತನಗೊಂಡ ಅಮೆರಿಕದ KC 135 ವಿಮಾನದಲ್ಲಿದ್ದ 6 ಸಿಬ್ಬಂದಿಯೂ ಮೃತ್ಯು: CENTCOM

ವಾಷಿಂಗ್ಟನ್: ಪಶ್ಚಿಮ ಇರಾಕ್ ನಲ್ಲಿ ಪತನಗೊಂಡ ಅಮೆರಿಕದ KC 135 ಇಂಧನ ತುಂಬುವ ಮಿಲಿಟರಿ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಸಿಬ್ಬಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

'ಎಕ್ಸ್'ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ, ಘಟನೆಯ ನಿಖರ ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ ಎಂದು CENTCOM ಹೇಳಿದೆ.

ಆದರೆ ವಿಮಾನ ಪತನವು 'ಪ್ರತಿಕೂಲ ಗುಂಡಿನ ದಾಳಿ ಅಥವಾ ಅದರ ಮಿತ್ರ ಪಡೆಗಳ ನಿಯಂತ್ರಣದಲ್ಲಿರುವ ವಾಯುಪ್ರದೇಶದಲ್ಲಿನ ಗುಂಡಿನ ದಾಳಿಯಿಂದಾಗಿ ಅಲ್ಲ' ಎಂದು ಸ್ಪಷ್ಟಪಡಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಸೇನಾ ಸಿಬ್ಬಂದಿಗಳ ಗುರುತುಗಳನ್ನು ಅವರ ಕುಟುಂಬಗಳಿಗೆ ಮಾಹಿತಿ ನೀಡಿದ 24 ಗಂಟೆಗಳ ಬಳಿಕ ಮಾತ್ರ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.

ಇದಕ್ಕೂ ಮೊದಲು ಶುಕ್ರವಾರ ಮುಂಜಾನೆ ಅಮೆರಿಕ ಸೇನೆ ನೀಡಿದ್ದ ಪ್ರಾಥಮಿಕ ಮಾಹಿತಿಯಲ್ಲಿ ಅಪಘಾತದಲ್ಲಿ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. ಉಳಿದ ಇಬ್ಬರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿತ್ತು. ಈಗ ವಿಮಾನದಲ್ಲಿದ್ದ ಎಲ್ಲಾ ಆರು ಮಂದಿ ಸಿಬ್ಬಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries