HEALTH TIPS

ಹಾರ್ಮುಝ್ ಜಲಸಂಧಿ ಮುಕ್ತಗೊಳಿಸಲು NATO ಸಹಾಯದ ಅಗತ್ಯವಿಲ್ಲ : ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್: ಇರಾನ್ ವಿಚಾರವಾಗಿ ನೇಟೊ ಸೇನಾ ಮೈತ್ರಿಕೂಟವು ಮೂರ್ಖತನವನ್ನು ಪ್ರದರ್ಶಿಸುತ್ತಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್‌ನ ದಿಗ್ಬಂಧನದಲ್ಲಿರುವ ಹಾರ್ಮುಝ್ ಜಲಸಂಧಿಯನ್ನು ಮರಳಿ ತೆರೆಯುವ ಪ್ರಯತ್ನಕ್ಕೆ ಕೈಜೋಡಿಸಬೇಕೆಂಬ ತನ್ನ ಮನವಿಗೆ ಸ್ಪಂದಿಸಿದ ನೇಟೋ ಸದಸ್ಯ ರಾಷ್ಟ್ರಗಳ ವಿರುದ್ಧ ತೀವ್ರ ಕಿಡಿಕಾರಿರುವ ಅವರು, ಅಮೆರಿಕಕ್ಕೆ ಇತರರ ನೆರವಿನ ಅಗತ್ಯವಿಲ್ಲವೆಂದು ಹೇಳಿದ್ದಾರೆ.

ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿರುವ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಬೆಂಗಾವಲು ಒದಗಿಸುವಂತೆ ತನ್ನ ಮನವಿಯನ್ನು ಅಮೆರಿಕದ ಬಹುತೇಕ ಜೊತೆಗಾರ ರಾಷ್ಟ್ರಗಳು ತಿರಸ್ಕರಿಸಿವೆ ಎಂದು ಟ್ರಂಪ್ ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಕೂಡಾ ಪರಿಸ್ಥಿತಿ ಶಾಂತವಾಗುವವರೆಗೆ ತನ್ನ ದೇಶವು ಹಾಗೆ ಮಾಡಲಾರದು ಎಂದು ಹೇಳಿದ್ದರು.

ಐಯರ್‌ಲ್ಯಾಂಡ್‌ನ ಪ್ರಧಾನಿ ಮೈಕೆಲ್ ಮಾರ್ಟಿನ್ ಅವರ ಓವಲ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, '' ನೇಟೋ ಅತ್ಯಂತ ಮೂರ್ಖತನದ ನಿರ್ಧಾರವನ್ನು ಕೈಗೊಂಡಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನೇಟೋ ಯಾವತ್ತಾದರೂ ನಮಗೆ ಜೊತೆಗೂಡಿತ್ತೇ ಎಂದು ನಾನು ಅಚ್ಚರಿಪಟ್ಟಿದ್ದೆ. ಹೀಗಾಗಿ ಈ ಸಂದರ್ಭವು ಒಂದು ದೊಡ್ಡ ಪರೀಕ್ಷೆಯಾಗಿದೆ ಎಂದು ನಾನು ದೀರ್ಘಸಮಯದಿಂದಲೂ ಹೇಳುತ್ತಾ ಬಂದಿದ್ದೇನೆ ಎಂದರು .

ಇರಾನ್ ವಿರುದ್ಧ ಏಕಾಂಗಿಯಾಗಿ ಹೋರಾಡಲು ಅಮೆರಿಕ ಸಿದ್ಧವಿದೆ ಎಂದು ಹೇಳಿದ ಅವರು, ಇಸ್ಲಾಮಿಕ್ ರಿಪಬ್ಲಿಕ್ ಆಡಳಿತದ ಅಣುಶಕ್ತಿ ಕಾರ್ಯಕ್ರಮವನ್ನು ಎದುರಿಸಬೇಕಾದ ಅಗತ್ಯವಿದೆಯೆಂಬುದನ್ನು ನೇಟೋ ಮಿತ್ರ ರಾಷ್ಟ್ರಗಳು ಒಪ್ಪಿಕೊಂಡಿದ್ದವು ಎಂದು ಹೇಳಿದರು.

ಐಯರ್‌ಲ್ಯಾಂಡ್ ಪ್ರಧಾನಿ ಜೊತೆ ಮಾತುಕತೆಗೆ ಮುನ್ನ ಟ್ರಂಪ್ ಅವರು ತನ್ನ 'ಟ್ರೂಥ್ ಸೋಶಿಯಲ್' ಸಾಮಾಜಿಕ ಜಾಲತಾಣವೊಂದರಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಇರಾನ್ ಯುದ್ಧದಲ್ಲಿ ಅಮೆರಿಕ ಪಡೆಗಳಿಗೆ, ಸೇನಾ ನೆರವಿನ ಅಗತ್ಯವಿರುವುದಿಲ್ಲವೆಂದು ಹೇಳಿದ್ದರು. ಇರಾನ್ ಯುದ್ಧದಲ್ಲಿ ಭಾಗಿಯಾಗಲು ಜಪಾನ್, ಆಸ್ಟ್ರೇಲಿಯ ಹಾಗೂ ದಕ್ಷಿಣ ಕೊರಿಯ ಮಾತ್ರವಲ್ಲದೆ ಬಹುತೇಕ ನೇಟೊ ಮಿತ್ರ ರಾಷ್ಟ್ರಗಳು ಬಯಸುತ್ತಿಲ್ಲ ಎಂದು ಹೇಳಿದ್ದರು. ದಶಕಗಳ ಇತಿಹಾಸವಿರುವ ನೇಟೊ, ಏಕಮುಖವಾದ ಸೇನಾ ಮೈತ್ರಿಕೂಟವಾಗಿದೆ ಎಂದವರು ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries