HEALTH TIPS

138 ಪದವಿ ಪಡೆದ ನಿವೃತ್ತ ಯೋಧನಿಂದ ಅಪರೂಪದ ಸಾಧನೆ

ಜೈಪುರ: ರಾಜಸ್ಥಾನದ ನಿವೃತ್ತ ಯೋಧರೊಬ್ಬರು 138 ಪದವಿ, ಡಿಪ್ಲೊಮಾ ಮತ್ತು ಪ್ರಮಾಣಪತ್ರಗಳನ್ನು ಪ‍ಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ಝುಂಜುನು ಜಿಲ್ಲೆಯ ನಿವಾಸಿ ದಶರಥ್‌ ಸಿಂಗ್‌(55) ಅವರು ಇತ್ತೀಚೆಗೆ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ವೇದಾಧ್ಯಯನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಅವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ದಶರಥ್‌ ಅವರು ಶಿಕ್ಷಣ ಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್‌ ರೆಕಾರ್ಡ್‌, ಗೋಲ್ಡನ್‌ ಬುಕ್ ಆಫ್‌ ರೆಕಾರ್ಡ್‌, ಏಷ್ಯಾ ಬುಕ್ ಆಫ್ ರೆಕಾರ್ಡ್‌ ಮತ್ತು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ ಸೇರಿದಂತೆ 11 ವಿಶ್ವ ದಾಖಲೆಗಳನ್ನು ಮಾಡಿದ್ದಾರೆ.

ಆರ್ಥಿಕ ಅಡಚಣೆಯಿಂದಾಗಿ ದಶರಥ ಅವರು ಹೆಚ್ಚಿನ ಶಿಕ್ಷಣ ಪಡೆದಿರಲಿಲ್ಲ. ಸೇನೆಗೆ ಸೇರಿದ ಬಳಿಕ ಎರಡು ತಿಂಗಳ ರಜಾ ಅವಧಿಯಲ್ಲಿ ಅಧ್ಯಯನ ಮಾಡುತ್ತಿದ್ದರು. 2004ರಲ್ಲಿ ಸೇನೆಯಿಂದ ನಿವೃತ್ತರಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಶಿಕ್ಷಣವನ್ನು ಪಡೆದರು.

ದಶರಥ್‌ ಮೂರು ಪಿಎಚ್‌.ಡಿ, 46 ಸ್ನಾತಕೋತ್ತರ ಪದವಿ, 7 ಪದವಿ, 23 ಡಿಪ್ಲೊಮಾ, ಸೇನೆಗೆ ಸಂಬಂಧಿಸಿದ 7 ಪದವಿ ಮತ್ತು 52 ಪ್ರಮಾಣಪತ್ರಗಳನ್ನು ಪಡೆದಿದ್ದಾರೆ.

ದಶರಥ ಅವರು ಸೇನೆಯ ಸಪ್ತ ಶಕ್ತಿ ಕಮಾಂಡ್‌ನ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೇವೆಯಲ್ಲಿರುವ ಮತ್ತು ನಿವೃತ್ತರಾಗಿರುವ ಸಿಬ್ಬಂದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾನೂನು ನೆರವು ನೀಡುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries