HEALTH TIPS

ಇಸ್ರೇಲ್- ಲೆಬನಾನ್‌ ನಡುವೆ ಮುಂದುವರಿದ ಸಂಘರ್ಷ: 13 ಮಂದಿ ಸೈನಿಕರ ಸಾವು

ಬೈರೂತ್‌ : ದಕ್ಷಿಣ ಭಾಗದ ನಬಾತಿಯೆ ಪಟ್ಟಣದ ಮೇಲೆ ಇಸ್ರೇಲ್‌ ಸೇನೆಯು ನಡೆಸಿದ ವಾಯುದಾಳಿಯಲ್ಲಿ 13 ಸೈನಿಕರು ಮೃತಪಟ್ಟಿದ್ದಾರೆ ಎಂದು ಲೆಬನಾನ್‌ ಸೇನೆ ತಿಳಿಸಿದೆ.

ಇಸ್ರೇಲ್‌ ಜೊತೆಗೆ ಲೆಬನಾನ್‌ ಸರ್ಕಾರವು ಮಾತುಕತೆಗೆ ಮುಂದಾದ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ.

ಇರಾನ್‌ ಬೆಂಬಲಿತ ಬಂಡುಕೋರರ ಗುಂಪು ಹಿಜ್ಬುಲ್ಲಾಕ್ಕೆ ಸೇರಿದ 200ಕ್ಕೂ ಹೆಚ್ಚು ನೆಲೆಗಳನ್ನು ಗುರಿಯಾಗಿಸಿ ಕಳೆದ 24 ಗಂಟೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

14ರಂದು ಮಾತುಕತೆ: 'ಮುಂದಿನ ಮಂಗಳವಾರದ ವೇಳೆಗೆ ಲೆಬನಾನ್‌ ಹಾಗೂ ಇಸ್ರೇಲ್‌ ನೇರ ಮಾತುಕತೆ ನಡೆಸಲಿವೆ' ಎಂದು ಲೆಬನಾನ್‌ನ ಅಧ್ಯಕ್ಷ ಜೋಸೆಫ್‌ ಔನ್‌ ಹೇಳಿಕೆ ನೀಡಿದ್ದಾರೆ.

ಅಮೆರಿಕದಲ್ಲಿರುವ ಲೆಬನಾನ್‌ ಹಾಗೂ ಇಸ್ರೇಲ್‌ ರಾಯಭಾರಿಗಳು ಲೆಬನಾನ್‌ನಲ್ಲಿನ ಅಮೆರಿಕ ರಾಯಭಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಬೆನ್ನಲ್ಲೇ, ಔನ್‌ ಈ ಹೇಳಿಕೆ ನೀಡಿದ್ದಾರೆ. ಉಭಯ ದೇಶಗಳ ನಡುವಿನ ಮಾತುಕತೆಗೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ.

ಇಸ್ರೇಲ್ ಹಾಗೂ ಹಿಜ್ಬುಲ್ಲಾ ಬಂಡುಕೋರರ ನಡುವಿನ ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ನೇರ ಮಾತುಕತೆಗೆ ಲೆಬನಾನ್‌ ಮುಂದಾಗಿದೆ.

ಲೆಬನಾನ್‌ನ ಕೋರಿಕೆಯ ಮೇರೆಗೆ ನೇರ ಮಾತುಕತೆಗೆ ಅನುಮತಿ ನೀಡಲಾಗಿದೆ ಎಂದು ಇಸ್ರೇಲ್‌ ಗುರುವಾರ ಘೋಷಿಸಿತ್ತು. ಆದರೆ ಈ ಕುರಿತಂತೆ ಅಧಿಕೃತ ಪ್ರಕಟಣೆ ನೀಡಿಲ್ಲ.

ಈ ಬೆಳವಣಿಗೆಯ ಕುರಿತಂತೆ ಹಿಜ್ಬುಲ್ಲಾ ಕೂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಸ್ರೇಲ್‌ ಜೊತೆಗಿನ ನೇರ ಮಾತುಕತೆಯನ್ನು ಸ್ಪಷ್ಟವಾಗಿ ಅದು ವಿರೋಧಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries