ಕೀವ್ : ಉಕ್ರೇನ್ನ ಒಡೆಸಾ ನಗರದ ಮೇಲೆ ರಷ್ಯಾ ತಡರಾತ್ರಿ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈಸ್ಟರ್ ಹಬ್ಬದ ಹಿನ್ನೆಲೆಯಲ್ಲಿ ಪ್ರಸ್ತಾಪಿಸಲಾಗಿರುವ ಕದನವಿರಾಮ ನಿಯಮವು ಜಾರಿಯಾಗಲು ಇನ್ನೇನು ಕೆಲವೇ ಗಂಟೆಗಳು ಇರುವಾಗಲೇ ರಷ್ಯಾ ಈ ದಾಳಿ ನಡೆಸಿದೆ ಎಂದೂ ಅಧಿಕಾರಿಗಳು ಆರೋಪಿಸಿದ್ದಾರೆ.
ಉಕ್ರೇನ್ ಅನ್ನು ಗುರಿಯಾಗಿಸಿ ಸುಮಾರು 160 ಡ್ರೋನ್ ಮೂಲಕ ರಷ್ಯಾ ತಡರಾತ್ರಿಯಲ್ಲಿ ದಾಳಿ ನಡೆಸಿದೆ. ಈ ಪೈಕಿ 133 ಡ್ರೋನ್ಗಳನ್ನು ಹೊಡೆದುರುಳಿಸ ಲಾಗಿದೆ ಎಂದು ಉಕ್ರೇನ್ ವಾಯುಪಡೆ ಮಾಹಿತಿ ನೀಡಿದೆ. ಉಕ್ರೇನ್ ಕೂಡ ರಷ್ಯಾ ಮೇಲೆ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ.

