ನವವದೆಹಲಿ: ರಾಜ್ಯಸಭಾ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಬಿಜೆಪಿ ಸೇರುವುದಾಗಿಯೂ ಪ್ರಕಟಿಸಿದ್ದಾರೆ.
ನಿರ್ಧಾರ ಪ್ರಕಟಿಸಿದ ಬಳಿಕ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಛಡ್ಡಾ, 'ನಾನು 15 ವರ್ಷಗಳ ಕಾಲ ನನ್ನ ಬೆವರು ಮತ್ತು ರಕ್ತ ಹರಿಸಿ ಪೋಷಿಸಿದ ಎಎಪಿ ಪಕ್ಷ ತನ್ನ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಯಿಂದ ವಿಮುಖವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಎಎಪಿ ವಿರುದ್ಧ ಆಕ್ರೋಶ: ಎಎಪಿ ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ ತನ್ನ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ. 'ನಾನು ತಪ್ಪು ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ' ಎಂದು ನನಗೆ ಕಳೆದ ಕೆಲವು ವರ್ಷಗಳಿಂದ ಅನಿಸುತ್ತಿತ್ತು. ಆದ್ದರಿಂದ ಇಂದು ನಾನು ಎಎಪಿಯಿಂದ ದೂರವಾಗಿ ಸಾರ್ವಜನಿಕರ ಹತ್ತಿರವಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಜೊತೆ ವಿಲೀನ: ರಾಜ್ಯಸಭೆಯಲ್ಲಿರುವ ಎಎಪಿಯ 2/3 ಭಾಗದಷ್ಟು ಸಂಸದರು ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂದು ಛಡ್ಡಾ ಹೇಳಿದ್ದಾರೆ.
ಯಾರೆಲ್ಲಾ ರಾಜೀನಾಮೆ ನೀಡಿದ್ದಾರೆ?
ರಾಘವ್ ಛಡ್ಡಾ
ಸಂದೀಪ್ ಪಾಠಕ್
ಅಶೋಕ್ ಮಿತ್ತಲ್
ಹರ್ಭಜನ್ ಸಿಂಗ್
ರಾಜೇಂದರ್ ಗುಪ್ತಾ
ವಿಕ್ರಮ್ ಸಾಹ್ನಿ
ಸ್ವಾತಿ ಮಾಲಿವಾಲ್

