ಕಾಸರಗೋಡು: ಎಡನೀರು ಸನಿಹದ ಚೂರಿಮೂಲೆ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಬಾಲಾಲಯ ಪ್ರತಿಷ್ಠೆ ಹಾಗೂ ನಾಗ ಪ್ರತಿಷ್ಠೆ ಕಾರ್ಯಕ್ರಮ ಏ.22 ಹಾಗೂ 23ರಂದು ಜರುಗಲಿದೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನ ಹಾಗೂ ಬ್ರಹ್ಮಶ್ರೀ ನೀರ್ಚಾಲು ಶ್ರೀರಾಮ ಭಟ್ಟರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
22ರಂದು ಸಂಜೆ ಗಣಪತಿ ಪೂಜೆ, ಪ್ರಾರ್ಥನೆ, ಆಚಾರ್ಯವರಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ ಬಲಿ, ಅನುಜ್ಞಾ ಪ್ರಾರ್ಥನೆ, ನಾಗ ಬಿಂಬ, ಜಲಾಧಿವಾಸ ಪೀಠ ಚಾಲನೆ, ನಾಗಬಿಂಬ ಸಹಿತವಾಗಿ ಪೀಠ ಶುದ್ಧಿ, ಶಯನ ಸಂಕಲ್ಪ ನಡೆಯುವುದು.
23ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹವನ, ಮೂಲ ದೇವತಾ ಹೋಮ, ಶಯನೋದ್ಘಾಟನೆ, ಭುವನೇಶ್ವರಿ ಪೂಜೆ, 8ರಿಂದ 9.30ರ ಮಧ್ಯೆ ಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರ ಪೀಠ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಸ್ಥಾಪ್ಯ ದೇವತಾ, ಪರಿವಾರ ದೇವತಾ ಪೂಜೆ, ಆಶ್ಲೇಷ ಬಲಿ, ಅನ್ನ ಸಂತರ್ಪಣೆ ನಡೆಯಲಿರುವುದು. 9.30ರಿಂದ ಶ್ರೀ ಕ್ಷೇತ್ರದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.

