ವಾಷಿಂಗ್ಟನ್: ಅಂಡಮಾನ್ ಸಮುದ್ರದಲ್ಲಿ ವಲಸಿಗರನ್ನು ಹೊತ್ತ ದೋಣಿ ಮುಳುಗಿದ ಪರಿಣಾಮ ಸುಮಾರು 250 ರೋಹಿಂಗ್ಯಾ ನಿರಾಶ್ರಿತರು ಹಾಗೂ ಬಾಂಗ್ಲಾದೇಶಿ ಪ್ರಜೆಗಳು ಕಾಣೆಯಾಗಿರುವ ದಾರುಣ ಘಟನೆ ನಡೆದಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ ಎಂದು Aljazeera ಮತ್ತು BBC ವರದಿ ಮಾಡಿದೆ.
ಬಾಂಗ್ಲಾದೇಶದಿಂದ ಮಲೇಷ್ಯಾಕ್ಕೆ ತೆರಳುತ್ತಿದ್ದ ದೋಣಿ ಭಾರೀ ಬಿರುಗಾಳಿಗೆ ಹಾಗೂ ಅತಿಯಾದ ಜನದಟ್ಟಣೆಯಿಂದಾಗಿ ಸಮುದ್ರದಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (Uಓಊಅಖ) ಹಾಗೂ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (Iಔಒ) ತಿಳಿಸಿವೆ. ದೋಣಿ ಮಗುಚಿದ ನಿಖರ ಸಮಯ ಇನ್ನೂ ಸ್ಪಷ್ಟವಾಗಿಲ್ಲ.
ಎ.9 ರಂದು ಬಾಂಗ್ಲಾದೇಶ ಕೋಸ್ಟ್ ಗಾರ್ಡ್ (ಃಅಉ) ಸಮುದ್ರದಲ್ಲಿ ತೇಲುತ್ತಿದ್ದ ಒಂಭತ್ತು ಮಂದಿಯನ್ನು ರಕ್ಷಿಸಿದೆ. ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾರೆ. ಡ್ರಮ್ ಗಳು ಹಾಗೂ ದಿಮ್ಮಿಗಳನ್ನು ಹಿಡಿದು ತೇಲುತ್ತಿದ್ದವರನ್ನು ಗುರುತಿಸಿ ಆಳವಾದ ನೀರಿನಿಂದ ರಕ್ಷಿಸಲಾಗಿದೆ ಎಂದು ಃಅಉ ವಕ್ತಾರ ಲೆಫ್ಟಿನೆಂಟ್ ಕಮಾಂಡರ್ ಶಬ್ಬೀರ್ ಆಲಮ್ ಸುಜನ್ ತಿಳಿಸಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ಆರು ಮಂದಿಯನ್ನು ಮಾನವ ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬದುಕುಳಿದವರಲ್ಲಿ ಒಬ್ಬರಾದ ರಫೀಕುಲ್ ಇಸ್ಲಾಂ, ಮಲೇಷ್ಯಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಕಳ್ಳಸಾಗಣೆದಾರರು ತಮ್ಮನ್ನು ದೋಣಿಗೆ ಕರೆದೊಯ್ದರು ಎಂದು ಹೇಳಿದ್ದಾರೆ. "ಟ್ರಾಲರ್(ಮೀನುಗಾರಿಕಾ ದೋಣಿ)ನೊಳಗಿನ ಜನದಟ್ಟಣೆಯಿಂದ 25ರಿಂದ 30 ಮಂದಿ ಉಸಿರುಗಟ್ಟಿ ಸಾವನ್ನಪ್ಪಿದರು. ದೋಣಿಯಿಂದ ಚೆಲ್ಲಿದ ಇಂಧನದಿಂದ ನನಗೆ ಸುಟ್ಟ ಗಾಯಗಳಾಗಿವೆ. ದೋಣಿ ಮುಳುಗಿದ ನಂತರ ಸುಮಾರು 36 ಗಂಟೆಗಳ ಕಾಲ ಸಮುದ್ರದಲ್ಲಿ ತೇಲುತ್ತಾ ಬದುಕುಳಿದಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಮ್ಯಾನ್ಮಾರ್ ನಲ್ಲಿ ಕಿರುಕುಳ ಮತ್ತು ಹಿಂಸಾಚಾರಕ್ಕೆ ಒಳಗಾಗಿರುವ ರೋಹಿಂಗ್ಯಾಗಳು ವರ್ಷಗಳಿಂದ ಪಲಾಯನ ಮಾಡುತ್ತಿದ್ದಾರೆ. ವಿಶೇಷವಾಗಿ 2017ರಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆ ಕ್ರಮದ ಬಳಿಕ 7.3 ಲಕ್ಷ ಮಂದಿ ಬಾಂಗ್ಲಾದೇಶಕ್ಕೆ ಶರಣಾಗಿದ್ದಾರೆ. ಮ್ಯಾನ್ಮಾರ್ ಸರ್ಕಾರವು ರೋಹಿಂಗ್ಯಾಗಳಿಗೆ ಪೌರತ್ವ ನಿರಾಕರಿಸಿರುವುದರಿಂದ ಅವರ ಸ್ಥಿತಿ ಇನ್ನಷ್ಟು ದುಸ್ಥರವಾಗಿದೆ.
ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ಕಳಪೆ ಜೀವನ ಪರಿಸ್ಥಿತಿಗಳು ಹಾಗೂ ಕುಗ್ಗುತ್ತಿರುವ ಮಾನವೀಯ ನೆರವು ಕಾರಣದಿಂದ ಅನೇಕರು ಮಲೇಷ್ಯಾ ಸೇರಿದಂತೆ ಇತರ ದೇಶಗಳಿಗೆ ಅಪಾಯಕಾರಿ ಸಮುದ್ರ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಇಂತಹ ದೋಣಿಗಳು ಸಾಮಾನ್ಯವಾಗಿ ಸಣ್ಣದಾಗಿದ್ದು, ಅತಿಯಾದ ಜನಸಂದಣಿ ಹೊಂದಿವೆ; ಆಹಾರ, ಶುದ್ಧ ನೀರು ಮತ್ತು ನೈರ್ಮಲ್ಯದಂತಹ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅಪಾಯ ಹೆಚ್ಚುತ್ತಿದೆ. ಗಮ್ಯಸ್ಥಾನ ತಲುಪುವ ಮೊದಲೇ ಅವರು ದುರಂತದಲ್ಲಿ ಸಾವನ್ನಪ್ಪುತ್ತಿದ್ದಾರೆ.
ಈ ದುರಂತವು ರೋಹಿಂಗ್ಯಾಗಳ ದೀರ್ಘಕಾಲದ ಸ್ಥಳಾಂತರದ ಭೀಕರ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ ಎಂದು Uಓಊಅಖ ತಿಳಿಸಿದೆ. ರಖೈನ್ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಹಿಂಸಾಚಾರದಿಂದ ಸುರಕ್ಷಿತ ವಾಪಸ್ಸಿನ ನಿರೀಕ್ಷೆ ಕ್ಷೀಣಿಸುತ್ತಿದೆ ಎಂದು ಸಂಸ್ಥೆಗಳು ತಿಳಿಸಿವೆ.
ರೋಹಿಂಗ್ಯಾ ನಿರಾಶ್ರಿತರು ಹಾಗೂ ಅವರನ್ನು ಆಶ್ರಯಿಸಿರುವ ಬಾಂಗ್ಲಾದೇಶದ ಸಮುದಾಯಗಳಿಗೆ ತುರ್ತು ನೆರವು ಒದಗಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಸಂಸ್ಥೆಗಳು ಮನವಿ ಮಾಡಿವೆ. ಜೊತೆಗೆ, ಮ್ಯಾನ್ಮಾರ್‌ನಲ್ಲಿ ಸ್ಥಳಾಂತರದ ಮೂಲ ಕಾರಣಗಳನ್ನು ಪರಿಹರಿಸಿ, ರೋಹಿಂಗ್ಯಾಗಳು ಸುರಕ್ಷಿತವಾಗಿ ಹಾಗೂ ಗೌರವಯುತವಾಗಿ ತಮ್ಮ ತವರೂರಿಗೆ ಮರಳಲು ಅನುಕೂಲಕರ ಪರಿಸ್ಥಿತಿಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ.

