HEALTH TIPS

25 ರಿಂದ ಕಜೆ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಪ್ರತಿಷ್ಠಾದಿನ ವಾರ್ಷಿಕೋತ್ಸವ

ಕಾಸರಗೋಡು: ಸಿರಿಬಾಗಿಲು ಕಜೆ ಶ್ರೀ ಧೂಮಾವತಿ ದೈವಸ್ಥಾನ ದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಹರಿಸೇವೆ ಮತ್ತು ಧರ್ಮ ನೇಮೋತ್ಸವ ಏ.25 ರಿಂದ 28 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.

25ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಅಂಗವಾಗಿ ಬೆಳಗ್ಗೆ 8ಕ್ಕೆ ಗಣಪತಿ ಹೋಮ, ನಾಗನ ಕಟ್ಟೆಯಲ್ಲಿ ನಾಗ ತಂಬಿಲ ಮಧ್ಯಾಹ್ನ 12ಕ್ಕೆ ದೈವಸ್ಥಾನದಲ್ಲಿ ತಂಬಿಲ ಸೇವೆ ನಡೆಯುವುದು. 

26 ರಂದು ಬೆಳಗ್ಗೆ 10ಕ್ಕೆ ಪುಷ್ಪರಾಜ ಶೆಟ್ಟಿ ತಲೆಕಲ ಇವರ ಸಾರಥ್ಯದಲ್ಲಿ ಮಕ್ಕಳ ಕುಣಿತ ಭಜನೆ, 12 ಘಂಟೆಗೆ ಶ್ರೀ ವೆಂಕಟ್ರಮಣ ದೇವರ ಹರಿ ಸೇವೆ,  ಸಂಜೆ 6ಕ್ಕೆ ಶ್ರೀ ರಾಜ ರಾಜೇಶ್ವರಿ ಭಜನಾ ಸಂಘ ಮಾಯಿಪ್ಪಾಡಿ, ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘ ಬೆದ್ರಡ್ಕ ಮತ್ತು ಶ್ರೀ ಮಹಾದೇವ ಭಜನಾ ಸಂಘ ಪುಲ್ಕೂರು ಇವರಿಂದ ಭಜನೆ ನಡೆಯಲಿರುವುದು. ರಾತ್ರಿ 8ಕ್ಕೆ ಉಪ ದೈವಗಳ ಕೋಲ ನಡೆಯುವುದು. 27ರಂದು ಬೆಳಿಗ್ಗೆ 10ಕ್ಕೆ  ಶ್ರೀ ಧೂಮಾವತಿ ದೈವದ ಧರ್ಮ ನೇಮ ನಡೆಯುವುದು. 28ರಂದು ಸಂಜೆ 4ಕ್ಕೆ ಪಲ್ಲದಮುದ್ದೆ ದೈವದ ಕೋಲ ಹಾಗೂ ಗುಳಿಗನ ಕೋಲ ನಡೆಯಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries