ನವದೆಹಲಿ: 'ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-3 (ಪಿಎಂಜಿಎಸ್‌ವೈ)' ಅನ್ನು 2028ರ ಮಾರ್ಚ್ ವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ.
ಈ ಯೋಜನೆಯು ಗ್ರಾಮೀಣ ಕೃಷಿ ಮಾರುಕಟ್ಟೆಗಳು, ಉನ್ನತ ಮಾಧ್ಯಮಿಕ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಜನವಸತಿಗಳನ್ನು ಸಂಪರ್ಕಿಸುವ ಮಾರ್ಗಗಳು ಮತ್ತು ಪ್ರಮುಖ ಗ್ರಾಮೀಣ ಸಂಪರ್ಕಗಳ ಏಕೀಕರಣ ಒಳಗೊಂಡಿರುತ್ತದೆ. ಯೋಜನೆಯ ಪರಿಷ್ಕೃತ ವೆಚ್ಚ ₹83,977 ಕೋಟಿ.
ಸಮತಟ್ಟಾದ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಸೇತುವೆಗಳನ್ನು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆಗಳನ್ನು ಪೂರ್ಣಗೊಳಿಸಲು 2028ರ ಮಾರ್ಚ್ ವರೆಗೆ ಕಾಲಮಿತಿ ನೀಡಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸೇತುವೆಗಳನ್ನು ಪೂರ್ಣಗೊಳಿಸಲು 2029ರ ಮಾರ್ಚ್ ವರೆಗೆ ಅವಕಾಶ ನೀಡಲಾಗಿದೆ.

