ಮಂಜೇಶ್ವರ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಪೋಲೀಸರು ವಶಪಡಿಸಿ ಮಂಜೇಶ್ವರ ಠಾಣಾ ವಠಾರದಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು ಬೆಂಕಿಗಾಹುತಿ ಯಾಗಿದೆ. ಕಾರು, ಆಟೋ ರಿಕ್ಷಾ, ಗೂಡ್ಸ್ ಆಟೋ ಸೇರಿದಂತೆ ಸುಮಾರು 30ರಷ್ಟು ವಾಹನಗಳು ಹಾನಿಗೀಡಾಗಿದೆ..
ಕಳೆದ ಹಲವು ಕಾಲದಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೊಲೀಸರು ವಶಪಡಿಸಿದ ವಾಹನಗಳನ್ನು ಪೆÇಲೀಸ್ ಠಾಣೆಯ ಸುಮಾರು ನೂರು ಮೀಟರ್ ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ ವಾಹನಗಳಿದ್ದ ಸ್ಥಳದಿಂದ ಹೊಗೆ ಕಾಣಿಸಿದ್ದು, ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಬೆಂಕಿ ವ್ಯಾಪಿಸುತ್ತಿರುವುದು ಕಂಡುಬಂದಿದೆ. ತಕ್ಷಣ ಎಸ್ಐ ವೈಷ್ಣವ್ ರಾಮಚಂದ್ರನ್ ನೇತೃತ್ವದ ಪೆÇಲೀಸರು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ಶಮನಗೊಳಿಸಿದ್ದಾರೆ. ಅಷ್ಟರೊಳಗೆ ಹಲವು ವಾಹನಗಳು ಉರಿದು ನಾಶಗೊಂಡಿವೆ. ವಾಹನಗಳನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಒಣಗಿದ್ದ ಹುಲ್ಲುಗಾವಲಿಗೆ ಯಾರೋ ಬೀಡಿ ಅಥವಾ ಸಿಗರೇಟ್ ಸೇದಿ ಎಸೆದ ಪರಿಣಾಮ ಬೆಂಕಿ ಹತ್ತಿಕೊಂಡಿರಬೇಕೆಂದು ಸಂಶಯಿಸಲಾಗಿದೆ.

