HEALTH TIPS

ಕಾಸರಗೋಡು: ಸಂಪೂರ್ಣ ಸಾಕ್ಷರತಾ ಘೋಷಣೆಯ 35ನೇ ವಾರ್ಷಿಕ ಆಚರಣೆ

ಕಾಸರಗೋಡು: ಕೇರಳ ಸಂಪೂರ್ಣ ಸಾಕ್ಷರತಾ ಘೋಷಣೆಯ 35ನೇ ವಾರ್ಷಿಕೋತ್ಸವವನ್ನು ಹೊಸದುರ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಕಾಸರಗೋಡು ಜಿಲ್ಲಾ ಸಾಕ್ಷರತಾ ಮಿಷನ್ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಸ್ಥಳೀಯಾಡಳಿತ ಇಲಾಖೆಯ ಕಾಸರಗೋಡು ಜಿಲ್ಲೆಯ ಸಹಾಯಕ ನಿರ್ದೇಶಕ ಎನ್ ಮನೋಜ್ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷರತಾ ಆಂದೋಲನದ ನೇತೃತ್ವ ವಹಿಸಿದ್ದ ಪಪ್ಪನ್ ಕುಟ್ಟಮತ್,  ಕೆ.ವಿ.ರಾಘವನ್ ಮಾಸ್ಟರ್, ಕೆ.ವಿ.ವಿಜಯನ್ ಮಾಸ್ಟರ್, ಪಿ.ಪಿ.ರಾಜನ್, ಸಿ.ಪಿ.ವಿ.ವಿನೋದ್ ಕುಮಾರ್, ಸಮಾಂತರ ಕಲಿಕಾ ಶಿಕ್ಷಕಿ ಕೆ.ಸರಿತಾ, ಕಚೇರಿ ಸಿಬ್ಬಂದಿ ಎನ್.ಕೆ.ಲಕ್ಷ್ಮಿ, ಕಾಞಂಗಾಡ್ ನಗರ ಸಭಾ ಮಾಜಿ ನೋಡಲ್ ಪ್ರಮೋಟರ್ ಆಯೇಷಾ, ರಿಯಾ ಪೌಲ್, ಪ್ರವರ್ತಕಿ ಎಂ.ಗೀತಾ  ಉಪಸ್ಥಿತರಿದ್ದರು.  ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಸಿ ಅಬ್ದುಲ್ ರಶೀದ್ ಸ್ವಾಗತಿಸಿದರು. ಪ್ರಚಾರಕಿ ವಿ ರಜನಿ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries