ಕೆಲವೊಮ್ಮೆ ನಮಗೆ, ಪರಿಚಯಸ್ಥರಿಂದಲೇ ಅಥವಾ ಮಾರ್ಕೆಟಿಂಗ್ ಕಂಪನಿಗಳಿಂದ ಬರುವ ಕರೆಗಳು (Unwanted Calls) ಅತಿಯಾದ ಕಿರಿಕಿರಿ ಉಂಟುಮಾಡುತ್ತವೆ. ಆದರೆ ಯಾವುದಾದರೂ ಅನಿವಾರ್ಯ ಕಾರಣಗಳಿಂದ ಅವರ ನಂಬರ್ ಅನ್ನು 'ಬ್ಲಾಕ್' (Block) ಮಾಡಲು ನಮಗೆ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಫೋನ್ ಸ್ವಿಚ್ ಆಫ್ (Phone switched off) ಮಾಡದೆಯೇ ಅಥವಾ ನಂಬರ್ ಬ್ಲಾಕ್ (Number Block) ಮಾಡದೆಯೇ ಆಯ್ದ ಕೆಲವು ಕರೆಗಳನ್ನು ಹೇಗೆ ತಡೆಯಬಹುದು ಎಂಬುದು ಅನೇಕರ ಪ್ರಶ್ನೆ? ಆದರೆ, ನಿಮಗೆ ಗೊತ್ತಾ, ನಿಮ್ಮ ಫೋನ್‌ನಲ್ಲಿರುವ ಕೆಲವು ಸೀಕ್ರೆಟ್ ಸೆಟ್ಟಿಂಗ್‌ಗಳನ್ನು ಬಳಸಿಕೊಂಡು ಈ ಸಮಸ್ಯೆಗೆ
ಪರಿಹಾರ ಕಂಡುಕೊಳ್ಳಬಹುದು ಅಂತ. ಆ ಕುರಿತ ವರದಿ ಇಲ್ಲಿದೆ.
ಬ್ಲಾಕ್ ಮಾಡದೆಯೇ ಕಾಲ್ ತಪ್ಪಿಸುವ ತಂತ್ರವೇನು?
ಸಾಮಾನ್ಯವಾಗಿ, ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರಿಗೂ ಯಾವುದಾದರೊಂದು ಸಮಯದಲ್ಲಿ ಅನೌನ್ ಸಂಖ್ಯೆಗಳಿಂದ ಬರುವ ಕರೆಗಳು ಕಿರಿಕಿರಿ ಉಂಟುಮಾಡುವುದು ಸಹಜ. ಅಂತಹ ಸಂದರ್ಭಗಳಲ್ಲಿ ನಾವು ಸಾಮಾನ್ಯವಾಗಿ ಮಾಡುವ ಮೊದಲ ಕೆಲಸವೆಂದರೆ ಆ ಸಂಖ್ಯೆಯನ್ನು ಬ್ಲಾಕ್ ಮಾಡುವುದು. ಆದರೆ ಸಂಖ್ಯೆಯನ್ನು ಬ್ಲಾಕ್ ಮಾಡಿದರೆ ಆ ವ್ಯಕ್ತಿಗೆ ಸುಲಭವಾಗಿ ತಿಳಿಯುತ್ತದೆ. ಆದರೆ, ಇದನ್ನು ತಪ್ಪಿಸಲು ಆಂಡ್ರಾಯ್ಡ್ ಫೋನ್‌ಗಳಲ್ಲಿ ಸೆನ್ಡ್ ಟೂ ವಾಯ್ಸ್‌ಮೇಲ್ ಎಂಬ ಅದ್ಭುತ ವೈಶಿಷ್ಟ್ಯವಿದೆ. ಈ ಸೆಟ್ಟಿಂಗ್ ಆನ್ ಮಾಡಿದರೆ ನಿಮ್ಮ ಫೋನ್ ರಿಂಗ್ ಆಗುವುದಿಲ್ಲ, ಬದಲಾಗಿ ಕರೆ ಮಾಡುವವರಿಗೆ ನೇರವಾಗಿ ಧ್ವನಿಮೇಲ್ ಸಂದೇಶ ಹೋಗುತ್ತದೆ. ಇದರಿಂದ ನೀವು ನೆಟ್‌ವರ್ಕ್ ಇಲ್ಲದ ಜಾಗದಲ್ಲಿ ಇದ್ದೀರಿ ಅಥವಾ ಫೋನ್ ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದೀರಿ ಎಂದು ಅವರು ಭಾವಿಸುತ್ತಾರೆ.
ಮುಂದುವರೆದು, ವಾಯ್ಸ್‌ಮೇಲ್ ಎನ್ನುವುದು ಕರೆ ಮಾಡುವವರು ನಿಮಗೆ ಒಂದು ಸಣ್ಣ ಆಡಿಯೊ ಸಂದೇಶವನ್ನು ರೆಕಾರ್ಡ್ ಮಾಡಿ ಬಿಡಲು ಅನುವು ಮಾಡಿಕೊಡುವ ವ್ಯವಸ್ಥೆ. ಈ ಸೆಟ್ಟಿಂಗ್ ಬಳಸಿದಾಗ ನೀವು, ಅವರು ಹೇಳಬೇಕೆನ್ನುವ ಪ್ರಮುಖ ಮಾಹಿತಿಯನ್ನು ಕಳೆದುಕೊಳ್ಳುವುದಿಲ್ಲ. ಜೊತೆಗೆ ಆ ವ್ಯಕ್ತಿಯೊಂದಿಗೆ ನೇರವಾಗಿ ಮಾತನಾಡಬೇಕಾದ ಅನಿವಾರ್ಯತೆಯೂ ಇರುವುದಿಲ್ಲ.

