ಕುಂಬಳೆ: ಕರ್ನಾಟಕ ಪಿ.ಯು.ಪರೀಕ್ಷಾ ಮಂಡಳಿ ನಡೆಸಿದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಮಂಗಳೂರು ಶ್ರೀಶಾರದಾ ಕಾಲೇಜಿನ ವಿದ್ಯಾರ್ಥಿನಿ ಗಾಯತ್ರೀ ಎಚ್. ಕಾಲೇಜು ಮಟ್ಟದಲ್ಲಿ ಪ್ರಥಮ ಹಾಗೂ ಕರ್ನಾಟಕ ರಾಜ್ಯದಲ್ಲೇ ಐದನೇ ರ್ಯಾಂಕ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಕುಂಬಳೆ ಸಮೀಪದ ನಾಯ್ಕಾಪು ಮಜಲಿನ ದಿ.ಗೋಪಾಲಕೃಷ್ಣ ಭಟ್ ಹಾಗೂ ಜೀವವಿಮಾ ನೌಕರೆ ವಿಜಯಲಕ್ಷ್ಮೀ ಭಟ್ ದಂಪತಿಗಳ ಪುತ್ರಿ. ಕುಂಬಳೆ ಹೋಲಿಫ್ಯಾಮಿಲಿ ವಿದ್ಯಾಲಯ ಮತ್ತು ಕಾಸರಗೋಡು ಚಿನ್ಮಯ ವಿದ್ಯಾಲಯದ ಹಳೆ ವಿದ್ಯಾರ್ಥಿನಿ.

-GAYATHRI%20H..jpg)
