HEALTH TIPS

ರಾಷ್ಟ್ರೀಯ ಹೆದ್ದಾರಿ 66: ಪೆರಿಯ-ಚಾಲಿಂಗಲ್ ಟೋಲ್‍ಗೇಟ್ ನಿರ್ಮಾಣ ಅಂತಿಮ ಹಂತದಲ್ಲಿ; ವರ್ಷದ ಮಧ್ಯಭಾಗದಲ್ಲಿ ಕಾರ್ಯಾಚರಣೆ ಪ್ರಾರಂಭ ಸಾಧ್ಯತೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿಯ ಭಾಗವಾಗಿ ಕಾಸರಗೋಡು ಜಿಲ್ಲೆಯ ಪೆರಿಯ-ಚಾಲಿಂಗಲ್‍ನಲ್ಲಿ ನಿರ್ಮಿಸಲಾಗುತ್ತಿರುವ ಟೋಲ್‍ಗೇಟ್ ನಿರ್ಮಾಣವು ಅಂತಿಮ ಹಂತದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2026 ರ ಏಪ್ರಿಲ್ ಮಧ್ಯಭಾಗದೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ, ವರ್ಷದ ಮಧ್ಯಭಾಗದೊಳಗೆ ಟೋಲ್ ಸಂಗ್ರಹವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ.


ಅರಿಕ್ಕಾಡಿಯಿಂದ ಚಾಲಿಂಗಕಲ್ ವರೆಗೆ:

ಜನರ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕುಂಬಳೆ ಅರಿಕ್ಕಾಡಿಯಲ್ಲಿ ಆರಂಭಿಸಿದ್ದ ತಾತ್ಕಾಲಿಕ ಟೋಲ್‍ಗೇಟ್ ಅನ್ನು ರದ್ದುಗೊಳಿಸಿತ್ತು. ತಲಪ್ಪಾಡಿ ನಂತರ ಕೇವಲ 22 ಕಿ.ಮೀ ದೂರದಲ್ಲಿ ಮತ್ತೊಂದು ಟೋಲ್‍ಗೇಟ್ ನಿರ್ಮಾಣದ ವಿರುದ್ಧ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರಿಕ್ಕಾಡಿ ಟೋಲ್‍ಗೇಟ್ ಅನ್ನು ತೆಗೆದುಹಾಕಲು ನಿರ್ಧರಿಸಿತು. ಬಿಜೆಪಿ ಜಿಲ್ಲಾ ಸಮಿತಿಯೂ ಈ ಟೋಲ್ ಗೇಟ್ ನಿಲುಗಡೆಗೊಳಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಿತ್ತೆಂದೂ ಹೇಳಲಾಗುತ್ತಿದೆ. 

ಅಲ್ಪಾವಧಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದ್ದ ಅರಿಕ್ಕಾಡಿ ಟೋಲ್‍ಗೇಟ್‍ನಿಂದ ಪ್ರಾಧಿಕಾರವು ಕೋಟ್ಯಂತರ ರೂ. ಸಂಗ್ರಹಿಸಿತು. ಈ ಆದಾಯದ ಅಂಕಿ ಅಂಶ ಹೊರಬಂದಾಗ ಸ್ಥಳೀಯರು ಸಹ ಆಶ್ಚರ್ಯಚಕಿತರಾದರು. ಅರಿಕ್ಕಾಡಿ ಮುಚ್ಚಿದ ನಂತರ ಪೆರಿಯ-ಮಾವುಂಗಲ್ ಮಾರ್ಗದಲ್ಲಿ ಚಾಲಿಂಗಕಲ್‍ನಲ್ಲಿ ಟೋಲ್‍ಗೇಟ್ ನಿರ್ಮಾಣವನ್ನು ವೇಗಗೊಳಿಸಲಾಯಿತು.

ಅಂಡರ್‍ಪಾಸ್ ಮುಷ್ಕರ ಬಿಕ್ಕಟ್ಟು:

ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದರೂ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಂಡರ್‍ಪಾಸ್‍ಗಳಿಗಾಗಿ ನಡೆಯುತ್ತಿರುವ ಮುಷ್ಕರಗಳು ನಿರ್ಮಾಣದ ಮೇಲೆ ಪರಿಣಾಮ ಬೀರುತ್ತಿವೆ. ಚಾಲಿಂಗಲ್ ಸೇರಿದಂತೆ ಪ್ರದೇಶಗಳಲ್ಲಿ ಅಂಡರ್‍ಪಾಸ್‍ಗಳಿಗೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಂಡರ್‍ಪಾಸ್ ಸಮಸ್ಯೆಗಳ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದ ಕಾರಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣವು ಅನೇಕ ಸ್ಥಳಗಳಲ್ಲಿ ಅನಿಶ್ಚಿತವಾಗಿದೆ. ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳ ಕ್ರಮಗಳಲ್ಲಿನ ವಿಳಂಬವು ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರುಗಳಿವೆ.


ಹೈಲೈಟ್ಸ್:

- ಕುಂಬಳೆ ಅರಿಕ್ಕಾಡಿಯಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಟೋಲ್‍ಗೇಟ್ ಅನ್ನು ಸಾರ್ವಜನಿಕರ ಪ್ರತಿಭಟನೆಯ ನಂತರ ರದ್ದುಗೊಳಿಸಲಾಯಿತು.

- ಅರಿಕ್ಕಾಡಿ ಟೋಲ್‍ಗೇಟ್ ವಿರುದ್ಧದ ಮುಷ್ಕರವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೇತೃತ್ವ ವಹಿಸಿದ್ದರು.

- ಅರಿಕ್ಕಾಡಿ ಟೋಲ್‍ಗೇಟ್ ಮುಚ್ಚಿದ ನಂತರ ಪ್ರಾಧಿಕಾರವು ಚಾಲಿಂಗಲ್‍ನಲ್ಲಿ ಟೋಲ್‍ಗೇಟ್ ನಿರ್ಮಾಣವನ್ನು ವೇಗಗೊಳಿಸಿತು.

- ಅಂಡರ್‍ಪಾಸ್‍ಗಳಿಗಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮುಷ್ಕರಗಳು ನಿರ್ಮಾಣದ ಮೇಲೆ ಪರಿಣಾಮ ಬೀರುತ್ತಿವೆ.

ಅಭಿಮತ:

-ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ಅಂಡರ್‍ಪಾಸ್ ನಿರ್ಮಾಣ ಅನಿಶ್ಚಿತತೆಯಲ್ಲಿದೆ. ಅಧಿಕೃತರಿಗೆ ಮನವಿ ಮಾಡಿ ಸೋತಿದ್ದೇವೆ. ಪ್ರತಿಯೊಂದು ಕಡೆಗಳಲ್ಲೂ ಅಂಡರ್‍ಪಾಸ್ ಗೆ ಹಲವು ಬಾರಿ ಹೋರಾಟ ಮಾಡಬೇಕಾಗುತ್ತಿದೆ. ಏನಿದ್ದರೂ ಬೇಡಿಕೆ ಈಡೇರುವ ವರೆಗೆ ವಿರಾಮವಿಲ್ಲ. ಇನ್ನಾದರೂ ಅಧಿಕೃತರು ಸ್ಪಷ್ಟತೆಗಳೊಂದಿಗೆ ಕಾರ್ಯನಿರ್ವಹಿಸಿದರೆ ಅಧ್ವಾನಗಳಿಂದ ಬಿಡುಗಡೆ ಸಾಧ್ಯ. ಜೊತೆಗೆ ಹಣ ಮತ್ತು ಸಮಯದ ಪೋಲು ತಡೆಗಟ್ಟಬಹುದು.

-ಎ.ಕೆ. ಆರೀಫ್.ಕುಂಬಳೆ

-ಹೆದ್ದಾರಿ ಕ್ರಿಯಾ ಸಮಿತಿ ಕಾರ್ಯದರ್ಶಿ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries