HEALTH TIPS

ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

 ಟೋಕಿಯೋ: ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಪ್ರದೇಶಗಳಿಂದ ದೂರ ಇರುವಂತೆ ಅಧಿಕಾರಿಗಳು ಜನರಲ್ಲಿ ಒತ್ತಾಯಿಸಿದ್ದಾರೆ. 


ಜಪಾನ್ ಮೆಟ್ರೋಲಾಜಿಕಲ್ ಏಜೆನ್ಸಿ(Japan Meteorological Agency) ಪ್ರಕಾರ, ಪೆಸಿಫಿಕ್ ಮಹಾಸಾಗರದಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಇವಾಟೆ ಪ್ರಾಂತ್ಯದ ಕುಜಿ ಬಂದರಿನಲ್ಲಿ ಸುಮಾರು 80 ಸೆಂಟಿಮೀಟರ್ ಎತ್ತರದ ಸುನಾಮಿ ಅಲೆ ಮತ್ತು ಪ್ರಾಂತ್ಯದ ಮತ್ತೊಂದು ಬಂದರಿನಲ್ಲಿ 40 ಸೆಂಟಿಮೀಟರ್ ಎತ್ತರದ ಸಣ್ಣ ಸುನಾಮಿ ಅಲೆ ದಾಖಲಾಗಿದೆ.

ಇದರ ಬೆನ್ನಲ್ಲೆ ಜಪಾನ್‌ ಪ್ರಧಾನ ಮಂತ್ರಿ ಸನೇ ತಕೈಚಿ ತುರ್ತು ಕಾರ್ಯಪಡೆ ರಚಿಸುವಂತೆ ಮತ್ತು ನಾಗರಿಕರನ್ನು ಸ್ಥಳಾಂತರಿಸುವ ಆದೇಶಗಳನ್ನು ನೀಡಿದ್ದಾರೆ. ಸಂಭವನೀಯ ಹಾನಿ ಬಗ್ಗೆ ಪರಿಶೀಲನೆ ಮತ್ತು ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries