HEALTH TIPS

ಹಾರ್ಮುಝ್ ಬಳಿ ಇರಾನ್‌ನ ಹಡಗನ್ನು ವಶಪಡಿಸಿಕೊಂಡ ಅಮೆರಿಕ: ಪ್ರತೀಕಾರದ ಪ್ರತಿಜ್ಞೆ ಮಾಡಿದ ಇರಾನ್

 ಟೆಹ್ರಾನ್: ಹಾರ್ಮುಝ್ ಜಲಸಂಧಿ ಬಳಿ ಇರಾನ್ ಧ್ವಜ ಹೊತ್ತ ಸರಕು ಸಾಗಣೆ ಹಡಗನ್ನು ಅಮೆರಿಕದ ಪಡೆಗಳು ವಶಪಡಿಸಿಕೊಂಡ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ. ಈ ಬೆಳವಣಿಗೆಯು, ಕದನ ವಿರಾಮ, ಶಾಂತಿ ಮಾತುಕತೆ ಕುರಿತ ರಾಜತಾಂತ್ರಿಕ ಪ್ರಯತ್ನಗಳಿಗೆ ಹೊಸ ಅನಿಶ್ಚಿತತೆಯನ್ನು ಉಂಟುಮಾಡಿದೆ. 


"ಇರಾನ್ ಬಂದರುಗಳ ಮೇಲೆ ಹೇರಲಾದ ದಿಗ್ಬಂಧನವನ್ನು ಜಾರಿಗೊಳಿಸುವ ಅಮೆರಿಕದ ಯುದ್ಧನೌಕೆಯ ಪುನರಾವರ್ತಿತ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಟೌಸ್ಕಾ ಎಂಬ ಹಡಗನ್ನು ಒಮಾನ್ ಕೊಲ್ಲಿಯಲ್ಲಿ ಎಂಜಿನ್ ಮೇಲೆ ದಾಳಿ ನಡೆಸಿ ನಿಷ್ಕ್ರಿಯಗೊಳಿಸಲಾಗಿದೆ. ಈಗ ಹಡಗಿನಲ್ಲಿರುವ ಸರಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಯುಎಸ್ ಸೆಂಟ್ರಲ್ ಕಮಾಂಡ್ ಈ ಕುರಿತ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಹಡಗಿಗೆ ನೀಡಿದ ಎಚ್ಚರಿಕೆಗಳು ಹಾಗೂ ಎಂಜಿನ್ ನಿಷ್ಕ್ರಿಯಗೊಳಿಸಲು ತೆಗೆದುಕೊಂಡ ಕ್ರಮವು ವೀಡಿಯೊದಲ್ಲಿ ಸೆರೆಯಾಗಿದೆ.

ಅಮೆರಿಕದ ಈ ಕ್ರಮವನ್ನು ಇರಾನ್ "ಸಮುದ್ರ ದರೋಡೆ" ಎಂದು ಕರೆದಿದ್ದು, ಪ್ರತಿಕಾರ ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಈ ಸಶಸ್ತ್ರ ದರೋಡೆ ಹಾಗೂ ಅಮೆರಿಕದ ಮಿಲಿಟರಿ ದಾಳಿ ವಿರುದ್ಧ ಇರಾನ್ ಸಶಸ್ತ್ರ ಪಡೆಗಳು ಶೀಘ್ರದಲ್ಲೇ ಪ್ರತೀಕಾರ ತೀರಿಸಲಿದೆ ಎಂದು ಇರಾನ್ ಮಿಟರಿಯ ವಕ್ತಾರ ಖತಮ್ ಅಲ್ ಅನ್ಬಿಯಾ ಹೇಳಿದ್ದಾರೆ.

ಇದರ ಬೆನ್ನಲ್ಲೆ ಅಮೆರಿಕದ ಮಿಲಿಟರಿ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಮೆರಿಕ ದೃಢಪಡಿಸಿಲ್ಲ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries