HEALTH TIPS

ಪೋಪ್ ಲಿಯೋರನ್ನು ಟೀಕಿಸಿ ತನ್ನದೇ ಯೇಸು ರೂಪದ AI ಚಿತ್ರ ಹಂಚಿಕೊಂಡ ಟ್ರಂಪ್!

 ವಾಶಿಂಗ್ಟನ್: ಪೋಪ್ ಲಿಯೋ ಘಿIಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೇಳಿಕೆಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ಯೇಸು ಕ್ರಿಸ್ತನಂತೆ ತೋರಿಸುವ AI ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. 


ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ವೇದಿಕೆಯಲ್ಲಿ ಹಂಚಿಕೊಂಡ ಈ ಚಿತ್ರದಲ್ಲಿ, ಅವರು ಯೇಸುವಿನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಪ್ ಲಿಯೋ ಘಿIಗಿ ಅವರೊಂದಿಗೆ ಹೆಚ್ಚುತ್ತಿರುವ ಮಾತಿನ ಸಮರದ ನಡುವೆ ಈ ಪೋಸ್ಟ್ ಗಮನ ಸೆಳೆದಿದೆ.

ಇದಕ್ಕೂ ಮೊದಲು ಟ್ರಂಪ್, ಪೋಪ್ ಅವರನ್ನು "ಅಪರಾಧದ ಮೇಲೆ ದುರ್ಬಲ" ಹಾಗೂ "ವಿದೇಶಾಂಗ ನೀತಿಯಲ್ಲಿ ಭಯಾನಕ" ಎಂದು ಟೀಕಿಸಿದ್ದರು. ವಲಸೆ ಸಮಸ್ಯೆ ಮತ್ತು ಇರಾನ್ ಸಂಘರ್ಷದ ವಿಷಯದಲ್ಲಿ ಇಬ್ಬರ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಪೋಪ್ ಶಾಂತಿ ಮತ್ತು ಸಂಯಮಕ್ಕೆ ಕರೆ ನೀಡಿದರೆ, ಟ್ರಂಪ್ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.

ತಮ್ಮ ದೀರ್ಘ ಪೋಸ್ಟ್ ನಲ್ಲಿ ಟ್ರಂಪ್, ಪೋಪ್ ಅವರು " ಎಡಪಂಥೀಯರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿದ್ದಾರೆ. ಪರಮಾಣು ನೀತಿ, ವೆನೆಝುವೆಲಾದಲ್ಲಿ ಅಮೆರಿಕದ ಹಸ್ತಕ್ಷೇಪ ಸೇರಿದಂತೆ ಹಲವು ವಿಚಾರಗಳಲ್ಲಿ ಪೋಪ್ ಅವರ ನಿಲುವುಗಳನ್ನು ಅವರು ಟೀಕಿಸಿದ್ದಾರೆ.

ಪೋಪ್ ಆಯ್ಕೆ ಪ್ರಕ್ರಿಯೆಯನ್ನೂ ಪ್ರಶ್ನಿಸಿರುವ ಟ್ರಂಪ್, ಅದು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. "ನಾನು ಶ್ವೇತಭವನದಲ್ಲಿ ಇರಲಿಲ್ಲದಿದ್ದರೆ, ಲಿಯೋ ವ್ಯಾಟಿಕನ್‌ನಲ್ಲಿ ಇರಲಿಲ್ಲ" ಎಂದು ಹೇಳಿದ ಅವರು, "ಅವರು ಅಮೆರಿಕನ್ ಆಗಿದ್ದರಿಂದಲೇ ಪೋಪ್ ಆಗಿದ್ದಾರೆ" ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ವೈಯಕ್ತಿಕವಾಗಿ ಟೀಕಿಸಿದ ಟ್ರಂಪ್, ಪೋಪ್ ಅವರ ಸಹೋದರನನ್ನು ಮೆಚ್ಚಿಕೊಂಡು, ಅವರನ್ನು ತಮ್ಮ "ಒಂಉಂ" ಚಳುವಳಿಯ ಬೆಂಬಲಿಗರೆಂದು ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries