HEALTH TIPS

Bihar| ದರೋಡೆ ಸಂದರ್ಭ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ: ಆಕ್ರೋಶಿತ ಸ್ಥಳೀಯರಿಂದ ಇಬ್ಬರು ದರೋಡೆಕೋರರ ಥಳಿಸಿ ಹತ್ಯೆ

ಪಾಟ್ನಾ: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಭೋರೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲಾ ಛಾಪರ್ ಗ್ರಾಮದಲ್ಲಿ ಆಭರಣ ಅಂಗಡಿಯೊಂದರಲ್ಲಿ ನಡೆದ ದರೋಡೆ ವೇಳೆ ದರೋಡೆಕೋರರು 32 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇದರಿಂದ ಆಕ್ರೋಶಿತರಾದ ಜನರ ಗುಂಪೊಂದು ನಾಲ್ವರು ದರೋಡೆಕೋರರಲ್ಲಿ ಇಬ್ಬರನ್ನು ಥಳಿಸಿ ಹತ್ಯೆಗೈದಿದೆ.

ಶಸಸ್ತ್ರ ದರೋಡೆಕೋರರು ಶುಕ್ರವಾರ ಲಾಲಾ ಛಾಪರ್‌ನಲ್ಲಿರುವ ಚಿನ್ನ ಮತ್ತು ಬೆಳ್ಳಿಯ ಆಭರಣ ಅಂಗಡಿಗೆ ನುಗ್ಗಿದರು. ಚಿನ್ನ-ಬೆಳ್ಳಿ ಆಭರಣಗಳನ್ನು ದರೋಡೆಗೈದು ಪರಾರಿಯಾಗಲು ಪ್ರಯತ್ನಿಸಿದರು. ಈ ಸಂದರ್ಭ ಸ್ಥಳೀಯರು ತಡೆ ಒಡ್ಡಿದರು. ದರೋಡೆಕೋರರು ಗುಂಡು ಹಾರಿಸಿದರು. ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಸಿಸಾಯಿ ಗ್ರಾಮದ ನಿವಾಸಿ ಡಬ್ಲು ಮಿಶ್ರಾ ಅವರು ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು.

ಡಬ್ಲು ಮಿಶ್ರಾ ಅವರ ಸಾವಿನ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಪರಾರಿಯಾಗಲು ಪ್ರಯತ್ನಿಸುತ್ತಿದ್ದ ದರೋಡೆಕೋರರನ್ನು ಸುತ್ತುವರಿದರು. ತಾವು ಸಿಕ್ಕಿ ಬಿದ್ದಿದ್ದೇವೆಂದು ಅರಿತುಕೊಂಡ ದರೋಡೆಕೋರರು ಗುಂಡು ಹಾರಿಸಲು ಆರಂಭಿಸಿದರು. ಆದರೆ, ಗ್ರಾಮಸ್ಥರು ಇಬ್ಬರು ದರೋಡೆಕೋರರನ್ನು ಸೆರೆ ಹಿಡಿದು ಥಳಿಸಿದರು. ಇದರಿಂದ ತೀವ್ರ ಗಾಯಗೊಂಡ ಇಬ್ಬರು ದರೋಡೆಕೋರರು ಸ್ಥಳದಲ್ಲೇ ಮೃತಪಟ್ಟರು.

ಘಟನೆಯ ಕುರಿತು ಮಾಹಿತಿ ಪಡೆದ ಭೋರೆ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿತು. ಗ್ರಾಮದಲ್ಲಿ ಉದ್ವಿಗ್ನತೆ ಉಂಟಾದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿಸಲಾಯಿತು.

ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ದರೋಡೆ ಕೃತ್ಯದಲ್ಲಿ ಎಷ್ಟು ಜನರು ಭಾಗಿಯಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇನ್ನಿಬ್ಬರು ದರೋಡೆಕೋರರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries