ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನ ಪೋಸ್ಟ್‌ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, ದೀರ್ಘಕಾಲದಿಂದ ತಮ್ಮನ್ನು ಸದ್ಗುಣ, ಸಮಗ್ರತೆ ಹಾಗೂ ಸಿದ್ಧಾಂತದ ಸಂಕೇತವೆಂದು ಬಿಂಬಿಸಿಕೊಂಡಿದ್ದ ನಾಯಕರ ಬಣ್ಣ ಈಗ ಬಯಲಾಗಿದೆ ಎಂದಿದ್ದಾರೆ.
''ಬಿಜೆಪಿಯ ವಾಷಿಂಗ್ ಮೆಷಿನ್ ಮೋದಿ ವಾಷಿಂಗ್ ಪೌಡರ್‌ನೊಂದಿಗೆ ಈಗ ಮತ್ತೆ ಬಂದಿದೆ'' ಎಂದು ಹೇಳಿರುವ ಅವರು, ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ತನ್ನತ್ತ ಸೆಳೆದು ಅವರು ಕಳಂಕವನ್ನು ತೊಡೆದು ಹಾಕುತ್ತಿದೆ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಅಧೀರ್ ರಂಜನ್ ಚೌಧುರಿ ಪ್ರತಿಕ್ರಿಯಿಸಿ, ಬಿಜೆಪಿ ಭೇಟೆ ರಾಜಕಾರಣವನ್ನು ಕರಗತ ಮಾಡಿಕೊಂಡಿದೆ. ವಿರೋಧ ಪಕ್ಷದ ನಾಯಕರನ್ನು ವ್ಯಹಾತ್ಮಕವಾಗಿ ಗುರಿ ಮಾಡಲಾಗುತ್ತಿದೆ. ಅವರು ತಮ್ಮ ಪಕ್ಷ ಸೇರುವಂತೆ ಪ್ರೇರೇಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಘವ ಚಡ್ಡಾ, ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಸೇರಿದಂತೆ ಆಪ್‌ನ ಹಲವು ರಾಜ್ಯ ಸಭಾ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಇವರು ಈ ಹೇಳಿಕೆ ನೀಡಿದ್ದಾರೆ.

