ಪೂರ್ವ ಬರ್ಧಮಾನ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಯತಂತ್ರ ರೂಪಿಸಿದ್ದು, ಇದರ ಭಾಗವಾಗಿ ಸರಣಿ ಚುನಾವಣಾ ರ್‍ಯಾಲಿಗಳು ನಡೆಸುತ್ತಿವೆ.
ಪೂರ್ವ ಬರ್ಧಮಾನ್‌ನಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಗಾಳದ ಜನರು ಬಿಜೆಪಿಯ ಮೇಲೆ ಹೊಂದಿರುವ ಪ್ರೀತಿಯನ್ನು ನೋಡಿ, ಟಿಎಂಸಿಗೆ ಭಯವಾಗಿದೆ.
ಹೀಗಾಗಿಯೇ ಒಂದರಂತೆ ಒಂದು ಸುಳ್ಳು ಹೇಳುತ್ತಿದ್ದಾರೆ. ಬಂಗಾಳದ ಸಹೋದರಿಯರಿಗೆ ತಿಂಗಳಿಗೆ ₹3,000 ನೀಡುವುದಾಗಿ ಬಿಜೆಪಿ ಘೋಷಿಸಿದೆ ಎಂದಿದ್ದಾರೆ.
'ಜನ ನಾಯಗನ್' ಸೋರಿಕೆ: ಕೆವಿಎನ್ ಪ್ರೊಡಕ್ಷನ್ಸ್ ಪರವಾಗಿ ನಿಲ್ಲುವೆ ಎಂದ ನಟ ರಿಷಬ್ಭಾರತಕ್ಕೆ ದಾರಿ ದೀಪವಾದ ಮಹಾನ್ ಚೇತನ.. ಜ್ಯೋತಿರಾವ್ ಫುಲೆ ಕುರಿತು Pಒ ಮೋದಿ ಲೇಖನ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಂಗಾಳದಲ್ಲಿ ಆಡಳಿತದಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ಯಾವುದೇ ಭಯವಿಲ್ಲದೆ ನಿರ್ಭೀತವಾಗಿ ಓಡಾಡಬಹುದು ಸಾಧ್ಯ ಎಂದು ಮೋದಿ ಹೇಳಿದ್ದಾರೆ.
ಟಿಎಂಸಿ ಸರ್ಕಾರ ರೈತರನ್ನು ನಿರ್ಲಕ್ಷ್ಯಿಸಿದ್ದು, ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಆಲೂಗಡ್ಡೆಗೆ ಬೆಂಬಲ ನೀಡುವುದಾಗಿ ಹೇಳಿದ್ದ ಟಿಎಂಸಿ ಸರ್ಕಾರ, ಇದೀಗ ಆಲೂಗಡ್ಡೆಗಳನ್ನು ಕೊಳೆಯಲು ಬಿಟ್ಟಿದೆ ಎಂದು ಕಿಡಿಕಾರುವ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಹಿತಾಸಕ್ತಿಗಳಿಗೆ ಮನ್ನಣೆ ನೀಡಲಾಗುವುದು ಎಂದಿದ್ದಾರೆ.
ಸಿಂಡಿಕೇಟ್ ವ್ಯವಸ್ಥೆಯ ಬದಲಿಗೆ, ಪ್ರತಿಯೊಂದು ಉದ್ಯಮಕ್ಕೂ ಪಾರದರ್ಶಕ ಟೆಂಡರ್ ಪ್ರಕ್ರಿಯೆಯನ್ನು ಸ್ಥಾಪಿಸಲಾಗುವುದು. ಕಟ್ವಾದಲ್ಲಿ ಸಂಭವಿಸಿದ ಸ್ಫೋಟದ ಹಿಂದಿನ ಕುತಂತ್ರಗಳ ಬಗ್ಗೆ ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ಅಂತಹ ಎಲ್ಲಾ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೋದಿ ಹೇಳಿದ್ದಾರೆ.

