HEALTH TIPS

ಕಾಳ್ಯಂಗಾಡು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ಶ್ರೀದೇವಿ ವಿಗ್ರಹ ಪ್ರತಿಷ್ಠೆ

ಕಾಸರಗೋಡು: ಬ್ರಹ್ಮಕಲಶೋತ್ಸವ ಸಂಬಂಧಿ ಚಟುವಟಿಕೆಗಳು ನಡೆಯುತ್ತಿರುವ ಕಾಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಬುಧವಾರ ಪ್ರಧಾನ ಆರಾಧನಾ ಮೂರ್ತಿಯಾಗಿರುವ ಶ್ರೀದೇವಿಯ ಪ್ರತಿಷ್ಠೆ ನೆರವೇರಿತು. 


ತಂತ್ರಿವರ್ಯ ಶ್ರೀಕೃಷ್ಣ ಗುರೂಜಿ ಕುಕ್ಕಾಜೆ ನೇತೃತ್ವ ವಹಿಸಿದ್ದರು. ಕಾರ್ಯಕ್ರಮ ಅಂಗವಾಗಿ ಗಣಪತಿ ಹೋಮ, ಪ್ರತಿಷ್ಠಾಂಗ ಹೋಮ, ಶಿಖರ ಪೂಜೆ, ಜೀವಕಲಶ ಪೂಜೆ, ಜೀವಕಲಾಭಿಷೇಕ, ಮಹಾಪೂಜೆ, ಕವಾಟಬಂಧನ ನಡೆಯಿತು. ದೇವಾಲಯದ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು,   ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ನಾಯ್ಕ್ ಕಾಳ್ಯಂಗಾಡು, ಕೋಶಾಧಿಕಾರಿ ಶಾಂತ ಕುಮರ್, ಜತೆ ಕೋಶಾಧಿಕಾರಿ ಪುನೀತ್ ಕೆಮ್ಮಣ್ಣು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನರಾಜ್ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ರಘು ಮೀಪುಗಿರಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ  ನಾಗರಾಜ ಹಾಗೂ ಪರಿವಾರ ದೈವ, ದೇವರುಗಳ ಪ್ರತಿಷ್ಠೆ ನಡೆಯಿತು. ತಂತ್ರಿವರ್ಯ  ಶ್ರೀಕೃಷ್ಣ ಗುರೂಜಿ ಕುಕ್ಕಾಜೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.  ಜೀವಕಲಶಾಭಿಷೇಕ, ಉದಯ ಪೂಜೆ ನಡೆಯಿತು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries