ಬದಿಯಡ್ಕ: ಕಣ್ಣಿಗೆ ಬಟ್ಟೆ ಕಟ್ಟಿ ಸೈಕಲ್ ಓಡಿಸಿದ ವಿದ್ಯಾರ್ಥಿನಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಳೆ. ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಶ್ರಾವ್ಯ ಕೆ.ಎಸ್. ಈ ಸಾಧನೆ ದಾಖಲಿಸಿ ನಾಡಿಗೆ ಕೀರ್ತಿ ತಂದ ಪ್ರತಿಭೆ.
ಮಾರ್ಚ್ 19ರಂದು ಕಣ್ಣಿಗೆ ಬಟ್ಟೆಕಟ್ಟಿ 5 ನಿಮಿಷ 8 ಸೆಕೆಂಡುಗಳಲ್ಲಿ 500 ಮೀಟರ್ ದೂರದ ತನಕ ಶ್ರಾವ್ಯ ಸೈಕಲ್ ಓಡಿಸಿ ನೂತನ ವಿಶ್ವದಾಖಲೆಗೆ ಪಾತ್ರಳಾಗಿದ್ದಾಳೆ. ದೃಢ ಸಂಕಲ್ಪವಿದ್ದರೆ ಕಣ್ಣಿಲ್ಲದೆಯೂ ನಾವು ಗುರಿಯನ್ನು ತಲುಪಬಹುದು ಎಂಬುದನ್ನು ಶ್ರಾವ್ಯ ಅವರು ಸಾಬೀತುಪಡಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಸೈಕಲ್ ಓಡಿಸುವುದು ಕೇವಲ ದೈಹಿಕ ಶ್ರಮವಲ್ಲ, ಅದಕ್ಕೆ ಅಪಾರವಾದ ಮಾನಸಿಕ ಶಕ್ತಿ ಮತ್ತು ಏಕಾಗ್ರತೆ ಬೇಕು. 2025 ಮಾರ್ಚ್ 9 ರಂದು ಈಕೆ ಇನ್ನೊಂದು ವಿಶ್ವದಾಖಲೆಯನ್ನು ನಿರ್ಮಿಸಿದ್ದಳು. 62 ಪದಗಳನ್ನು ಮತ್ತು ಅರ್ಥಪೂರ್ಣವಾದ ವಾಕ್ಯಗಳನ್ನು ಕಣ್ಣಿಗೆ ಬಟ್ಟೆಕಟ್ಟಿ ಕೇವಲ 1 ನಿಮಿಷ 58 ಸೆಕೆಂಡುಗಳಲ್ಲಿ ಓದಿದ ಸಾಧನೆ ಈಕೆಯದು. ಸುಮಾರು 25 ರಿಂದ 30 ರಷ್ಟು ವಿವಿಧ ಚಟುವಟಿಕೆಗಳನ್ನು ಈಕೆ ಕಣ್ಣಿಗೆ ಬಟ್ಟೆ ಕಟ್ಟಿ ಮಾಡುತ್ತಾಳೆ. ಪ್ರತಿಭಾನ್ವಿತಳಾದ ಈಕೆ ನೀರ್ಚಾಲು ಕುಂಜಾರು ನಿವಾಸಿ ಶ್ಯಾಮಪ್ರಸಾದ ಕೆ.ವಿ. ಮತ್ತು ಶೋಭಾ ದಂಪತಿಗಳ ಪುತ್ರಿ.

-%20Shravya.jpg)
-%20Shravya.jpg)
