ಬದಿಯಡ್ಕ: ಸನಾತನ ಸಂಸ್ಕøತಿಯ ತತ್ತ್ವಾದರ್ಶಗಳನ್ನು ಹಿಂದೂ ಸಮಾಜದಲ್ಲಿ ಮರುಪೂರಣಗೊಳಿಸುತ್ತಾ ಕೌಟುಂಬಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸಿ ಧಾರ್ಮಿಕ ಶ್ರದ್ಧೆ, ವಿಶ್ವಾಸ, ಜ್ಞಾನ ಹಾಗೂ ಸಾಮಾಜಿಕ ಸಾಮರಸ್ಯದ ಭಾವ ಜಾಗೃತಗೊಳಿಸಲು ಲೋಕ ಕಲ್ಯಾಣಾರ್ಥವಾಗಿ ಶ್ರೀಮದ್ ಭಾಗವತ ಸಪ್ತಾಹ ಎಂಬ ಪುಣ್ಯ ಕಾರ್ಯಕ್ರಮವು ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದಲ್ಲಿ ಈಗಾಗಲೇ ಪ್ರಾರಂಭಗೊಂಡು ಏ. 16ರ ತನಕ ಜರುಗಲಿರುವುದು. ಆ ಪ್ರಯುಕ್ತ ಏ.14 ಮಂಗಳವಾರ ಸಂಜೆ 04:ಕ್ಕೆ ಮವ್ವಾರು ಶ್ರೀಕೃಷ್ಣ ಭಜನ ಮಂದಿರದಿಂದ ಕುರುಮುಜ್ಜಿಕಟ್ಟೆ ಶ್ರೀ ಧಮ9ಶಾಸ್ತ ಭಜನ ಮಂದಿರಕ್ಕೆ ರುಕ್ಮಿಣೀ ಸ್ವಯಂವರ ಘೋಷಯಾತ್ರೆಯು ಹೊರಡಲಿರುವುದು. ಈ ಪುಣ್ಯ ಕಾರ್ಯದಲ್ಲಿ ಭಕ್ತ ಬಂಧುಗಳು ಭಾಗವಹಿಸಿ ಶ್ರೀಕೃಷ್ಣ ಪರಮಾತ್ಮನ ದಿವ್ಯಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

.jpg)
