ನವದೆಹಲಿ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮುಟ್ಟಾಗುವ ಮಹಿಳೆಯರು ಪ್ರವೇಶ ಮಾಡುವಂತಿಲ್ಲ ಎನ್ನುನ ವಾದವನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆ. ಅಲ್ಲದೆ ಎಲ್ಲಾ ವಯೋಮಾನದವರಿಗೂ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಟ್ಟ 2018ರ ಸುಪ್ರೀಂ ಕೋರ್ಟ್ ತೀರ್ಪು, 'ಪುರುಷರು ಶ್ರೇಷ್ಠ, ಮಹಿಳೆಯರು ಕನಿಷ್ಠ' ಎನ್ನುವ ಊಹೆಗೆ ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಶಬರಿಮಲೆ ದೇವಾಲಯದಲ್ಲಿನ ಮಹಿಳಾ ಪ್ರವೇಶ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಮರ್ಥಿಸಿದ್ದು, ಧಾರ್ಮಿಕ ಆಚರಣೆಗಳಲ್ಲಿನ ಲಿಂಗ ತಾರತಮ್ಯದ ಕುರಿತಾದ ಸುಪ್ರೀಂ ಕೋರ್ಟ್ ವಿಚಾರಣೆಯು ಮಹತ್ವ ಪಡೆದುಕೊಂಡಿದೆ.ಪ್ರಮುಖ ಮುಖ್ಯಾಂಶಗಳು• ಕೇಂದ್ರ ಸರ್ಕಾರದ ಬೆಂಬಲಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರಿಗೆ ವಿಧಿಸಲಾದ ನಿರ್ಬಂಧವನ್ನು ಕೇಂದ್ರ ಸರ್ಕಾರವು ಸಮರ್ಥಿಸಿಕೊಂಡಿದ್ದು, ಈ ಕುರಿತು ನ್ಯಾಯಾಲಯದಲ್ಲಿ ತನ್ನ ವಾದ ಮಂಡಿಸಿದೆ.• ಧಾರ್ಮಿಕ ಆಚರಣೆಯ ವಾದಧಾರ್ಮಿಕ ಸ್ಥಳಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆಯೇ ದೇಗುಲದ ನಿಯಮಗಳು ಇರುತ್ತವೆ. ದೇವಾಲಯಗಳಲ್ಲಿ ಪುರುಷರಿಗೂ ಪ್ರವೇಶವಿಲ್ಲದ ನಿದರ್ಶನಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.• ನ್ಯಾಯಾಲಯದ ಸಂವಿಧಾನಿಕ ಪೀಠ2018ರಲ್ಲಿ ನೀಡಲಾದ ತೀರ್ಪನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ವಿಸ್ತೃತ ಪೀಠವನ್ನು ರಚಿಸಿದ್ದು, ಈಗ ಪ್ರಕರಣದ ವಿಚಾರಣೆಯನ್ನು ನಡೆಸಲಾಗುತ್ತಿದೆ.• ಕೊಟ್ಟನ್ಕುಳಂಗರ ಉದಾಹರಣೆಕೇರಳದ ಕೊಟ್ಟನ್ಕುಳಂಗರ ದೇಗುಲದಲ್ಲಿ ಪುರುಷರು ಸೀರೆ ಧರಿಸಿ ಮಹಿಳೆಯರಂತೆ ವೇಷಭೂಷಣ ತೊಟ್ಟು ದೇವಿಯನ್ನು ಆರಾಧಿಸುವ ಶತಮಾನದ ಪರಂಪರೆಯಿದೆ ಎಂದು ಸರ್ಕಾರ ಉಲ್ಲೇಖಿಸಿದೆ.• ಮಹಿಳಾ ತಾರತಮ್ಯದ ವಿವಾದಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ತಾರತಮ್ಯವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯು ಸಂವಿಧಾನಿಕ ವಿಚಾರಣೆಗೆ ಒಳಪಟ್ಟಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.ಪ್ರಮುಖ ಅಂಕಿಅಂಶಗಳು10 ರಿಂದ 50 ವರ್ಷನಿರ್ಬಂಧ ಹೇರಲಾಗಿದ್ದ ಮಹಿಳೆಯರ ವಯೋಮಿತಿಐವರು2018ರ ತೀರ್ಪು ನೀಡಿದ ಸಂವಿಧಾನಿಕ ಪೀಠದ ಸದಸ್ಯರ ಸಂಖ್ಯೆ4:1ಐವರು ನ್ಯಾಯಾಧೀಶರ ತೀರ್ಪಿನ ಬಹುಮತ2018ರ ಸೆಪ್ಟೆಂಬರ್ವಿವಾದಾಸ್ಪದ ತೀರ್ಪು ನೀಡಿದ ದಿನಾಂಕ2019ರ ನವೆಂಬರ್ 14ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ದಿನಾಂಕಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಶಬರಿಮಲೆ ಸೇರಿ ದೇಶದ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯ ಮೇಲಿನ ತಾರತಮ್ಯ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಹೀಗೆ ಅರುಹಿದೆ.
ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಿದ ಕೇಂದ್ರ ಸರ್ಕಾರದ ಪರ ಹಾಜರಾದ ತುಷಾರ್ ಮೆಹ್ತಾ, ಯಾವುದೆಲ್ಲಾ ದೇಗುಲಗಳಲ್ಲಿ ಪುರುಷರಿಗೂ ಪ್ರವೇಶ ಇಲ್ಲ ಎನ್ನುವುದನ್ನು ಲಿಖಿತವಾಗಿ ಸಲ್ಲಿಸಲಾಗಿದೆ ಎಂದರು.
ಕೇರಳದ ದೇಗುಲವೊಂದರಲ್ಲಿ ಪುರುಷರು ಮಹಿಳೆಯರಂತೆ ಬಟ್ಟೆ ಧರಿಸಿ ದೇಗುಲ ಪ್ರವೇಶ ಮಾಡುತ್ತಾರೆ. ಅದಕ್ಕಾಗಿ ಅವರು ಬ್ಯೂಟಿ ಪಾರ್ಲರ್ಗೆ ತೆರಳುತ್ತಾರೆ. ಕುಟುಂಬದ ಮಹಿಳಾ ಸದಸ್ಯರು ಸೀರೆ ಉಡಲು ಅವರಿಗೆ ಸಹಾಯ ಮಾಡುತ್ತಾರೆ ಎಂದು ಮೆಹ್ತಾ ಹೇಳಿದರು.
'ಹೀಗಾಗಿ ಧಾರ್ಮಿಕ ಆಚರಣೆಯಲ್ಲಿ ಮಹಿಳಾ ಕೇಂದ್ರಿತ, ಪುರುಷ ಕೇಂದ್ರಿತ ಎನ್ನುವುದು ಇಲ್ಲ. ಈಗಿನ ಪ್ರಕರಣ ಮಹಿಳೆಯರಿಗೆ ಸಂಬಂಧಪಟ್ಟದ್ದು' ಎಂದು ಮೆಹ್ತಾ ಹೇಳಿದರು.
ಕೇರಳದ ಕೊಟ್ಟನ್ಕುಳಂಗರ ಶ್ರೀದೇವಿ ದೇಗುಲದಲ್ಲಿ ವಾರ್ಷಿಕ ಚಮಯವಿಳಕ್ಕು ಹಬ್ಬಕ್ಕೆ ಪುರುಷರು ಮಹಿಳೆಯರಂತೆ ಬಟ್ಟೆ ಧರಿಸಿ ದೇಗುಲಕ್ಕೆ ಬರುತ್ತಾರೆ. ದೇವಿಯನ್ನು ಗೌರವಿಸುವ ಈ ಪರಂಪರೆಗೆ ಶತಮಾನದ ಇತಿಹಾಸವಿದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು 2018ರ ಸೆಪ್ಟೆಂಬರ್ನಲ್ಲಿ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠವು 4:1 ಬಹುಮತದ ತೀರ್ಪಿನ ಮೂಲಕ ತೆರವುಗೊಳಿಸಿತ್ತು. ಶತಮಾನಗಳಷ್ಟು ಹಳೆಯದಾದ ಈ ಹಿಂದೂ ಧಾರ್ಮಿಕ ಆಚರಣೆಯು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಹೇಳಿತ್ತು.
ಬಳಿಕ 2019ರ ನವೆಂಬರ್ 14ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು, ಮಹಿಳೆಯರ ವಿರುದ್ಧದ ತಾರತಮ್ಯದ ಪ್ರಕರಣಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಈಗ ಅದರ ವಿಚಾರಣೆ ನಡೆಯುತ್ತದೆ.
ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ಎಂ.ಎಂ ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ ಕುಮಾರ್, ಅಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ. ವರಾಳೆ, ಆರ್. ಮಾಧವನ್ ಹಾಗೂ ಜಾಯ್ಮಲ್ಯ ಬಾಗ್ಚಿ ಇದ್ದಾರೆ.

