HEALTH TIPS

ಇರಾನ್‌ ನಾಯಕರನ್ನು ಭೇಟಿ ಮಾಡಿದ ಪಾಕ್ ಸೇನಾ ಮುಖ್ಯಸ್ಥ: ಸಂಧಾನದ ಕುರಿತು ಮನವೊಲಿಕೆ

 ಇಸ್ಲಾಮಾಬಾದ್: ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರ ಮೂರು ದಿನಗಳ ಇರಾನ್ ಭೇಟಿಯು ಯಶಸ್ವಿಯಾಗಿದೆ. ಟೆಹರಾನ್‌ನಲ್ಲಿ ಅವರು ಇರಾನ್‌ನ ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ತಿಳಿಸಿದ್ದಾರೆ. 


ಇರಾನ್ ಪ್ರವಾಸ ವೇಳೆ, ಅಲ್ಲಿನ ಪ್ರಮುಖ ನಾಯಕರೊಂದಿಗೆ ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಚರ್ಚಿಸಲಾಗಿದೆ.

ಸಂಧಾನ ಮಾತುಕತೆಗೆ ಅವರನ್ನು ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಅಚಲವಾದ ಸಂಕಲ್ಪವನ್ನು ಪಾಕಿಸ್ತಾನ ಹೊಂದಿದೆ. ಆ ಮೂಲಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ಹೊಂದುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಅಮೆರಿಕ-ಇರಾನ್ ನಡುವಿನ ಕದನ ವಿರಾಮ ಮಾತುಕತೆಯಲ್ಲಿ ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸಿತ್ತು. ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ವಿಫಲವಾಗಿತ್ತು. ಇದೀಗ ಮುನೀರ್ ಅವರು ಇರಾನ್‌ಗೆ ಭೇಟಿ ನೀಡಿರುವುದು ಅಮೆರಿಕ-ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯುವ ಕುರಿತು ಭರವಸೆ ಮೂಡಿಸಿದೆ.

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಏ.15ರಿಂದ 18ರವರೆಗೆ ಸೌದಿ ಅರೇಬಿಯಾ, ಕತಾರ್ ಹಾಗೂ ಟರ್ಕಿಗೆ ಭೇಟಿ ನೀಡಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries