ಕಾಸರಗೋಡು: ಅಖಿಲ ಭಾರತ ಕಾನ್‍ಫೆಡರೇಶನ್ ಆಫ್ ಇಂಡಿಯಾ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ವಿದ್ಯಾನಗರದ ಎ.ಎಸ್.ಎ.ಪಿ. ಕೌಶಲ್ಯ ಉದ್ಯಾನವನದಲ್ಲಿ ಆಚರಿಸಲಾಯಿತು.
ಎ.ಐ.ಸಿ.ಎಸ್.ಟಿ.ಒ. ರಾಜ್ಯ ಸಮಿತಿ ಅಧ್ಯಕ್ಷ ಬಾಬು ಎನ್. ಸಮಾರಂಭ ಉದ್ಘಾಟಿಸಿದರು. ಜಾತಿ ಮತ್ತು ಮೈಬಣ್ಣದ ಆಧಾರದ ಮೇಲೆ ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದೆ. ಕಣ್ಣೂರಿನ ದಂತ ಕಾಲೇಜಿನ ನಿತಿನ್‍ರಾಜ್ ಅವರ ಸಾವಿಗೆ ಕಾರಣರಾದವರನ್ನು ಪರಿಶಿಷ್ಟ ಜಾತಿ (ದೌರ್ಜನ್ಯ ತಡೆ) ಕಾಯ್ದೆಯನ್ವಯ ಬಂಧಿಸಿ ಕ್ರಮಕೈಗೊಳ್ಳದಿದ್ದಲ್ಲಿ, ನ್ಯಾಯ ಲಭಿಸುವಲ್ಲಿ ವರೆಗೆ ಆಂದೋಲನ ಮುಂದುವರಿಸುವುದಾಗಿ ಮುಖಂಡರು ತಿಳಿಸಿದ್ದಾರೆ.
ಎಐಸಿಎಸ್‍ಸಿಎಸ್‍ಟಿಓ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅತ್ಯುತ್ತಮ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಪಡೆದ ಡಾ. ರಾಧಾಕೃಷ್ಣನ್, ಮಾಧವ ಮಾಸ್ಟರ್ ಮತ್ತು ಕೃಷಿಕ ರತ್ನ ಪ್ರಶಸ್ತಿ ಪಡೆದ ಅಬ್ದುಲ್ ಖಾದರ್ ಬಾರಿಕ್ಕಾಡ್, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ವಸಂತ ಅಜಕೋಡ್ ಅವರನ್ನು ಸನ್ಮಾನಿಸಲಾಯಿತು. ಪೆÇನ್ನಪ್ಪನ ಅಮ್ಮಂಗೋಡ್, ರಾಘವನ್ ಉದುಮ, ಗಣೇಶ್ ಪಾಟಿ, ಶಂಕರ, ರಾಮನ್, ಚಂದ್ರ ಅಡೂರು, ಆನಂದ, ರಾಜನ್ ಬೇಪ್ ಉಪಸ್ಥಿತರಿದ್ದರು.

