HEALTH TIPS

ಪಾಕಿಸ್ತಾನದೊಂದಿಗೆ ಮಾತುಕತೆ ಮುಗಿಸಿ, ರಷ್ಯಾಕ್ಕೆ ತೆರಳಿದ ಅರಾಘ್ಚಿ ಹೇಳಿದ್ದೇನು?

 ಮಾಸ್ಕೋ: ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಅವರು ಅಮೆರಿಕ ಜೊತೆಗಿನ ಎರಡನೇ ಸುತ್ತಿನ ಶಾಂತಿ ಮಾತುಕತೆಯ ಅನಿಶ್ಚಿತತೆ ನಡುವೆ ಪಾಕಿಸ್ತಾನ ಮತ್ತು ಒಮಾನ್ ಪ್ರಯಾಣ ಮುಗಿಸಿ ಇದೀಗ ರಷ್ಯಾಕ್ಕೆ ತೆರಳಿದ್ದಾರೆ.


ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಆಗಮಿಸಿದ ನಂತರ, ಪಾಕಿಸ್ತಾನ ಮತ್ತು ಒಮಾನ್‌ ಜೊತೆಗಿನ ತಮ್ಮ ರಾಜತಾಂತ್ರಿಕ ಮಾತುಕತೆಯ ವಿವರವನ್ನು ಹಂಚಿಕೊಂಡಿದ್ದಾರೆ.

ರಷ್ಯಾಕ್ಕೆ ಆಗಮಿಸಿದ ನಂತರ ಅರಾಘ್ಚಿ, ಪಶ್ಚಿಮ ಏಷ್ಯಾದಲ್ಲಿನ ಯುದ್ಧವನ್ನು ಪರಿಹರಿಸಲು ಎರಡನೇ ಸುತ್ತಿನ ಶಾಂತಿ ಮಾತುಕತೆಯ ಬಗ್ಗೆ ಅನಿಶ್ಚಿತತೆಯ ನಡುವೆಯೂ, ಇಸ್ಲಾಮಾಬಾದ್‌ಗೆ ತಮ್ಮ ಪ್ರವಾಸವು ಅತ್ಯಂತ ಫಲಪ್ರದವಾಗಿದೆ ಮತ್ತು ಪಾಕಿಸ್ತಾನದ ಉನ್ನತ ನಾಯಕತ್ವದೊಂದಿಗೆ ಉತ್ತಮ ಸಮಾಲೋಚನೆ ನಡೆಸಿದೆ ಎಂದು ಹೇಳಿದರು.‌

ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಯನ್ನು ಉಲ್ಲೇಖಿಸಿದ ಅರಾಘ್ಚಿ, 'ನಾವು ಪಾಕಿಸ್ತಾನದಲ್ಲಿರುವ ನಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಾಲೋಚನೆ ನಡೆಸಿದ್ದೇವೆ. ನಮ್ಮ ಈ ಪ್ರವಾಸ ಯಶಸ್ವಿಯಾಗಿದೆ. ಇತ್ತೀಚಿಗೆ ನಡೆದ ಸಭೆಗಳಲ್ಲಿ ಮಾತುಕತೆಗಳು ಯಾವ ದಿಕ್ಕಿನಲ್ಲಿ ಮತ್ತು ಯಾವ ಪರಿಸ್ಥಿತಿಗಳಲ್ಲಿ ಮುಂದುವರಿಯಬಹುದು ಎಂಬುದನ್ನು ಚರ್ಚಿಸಿದ್ದೇವೆ' ಎಂದರು.

'ಹಿಂದಿನ ಸುತ್ತುಗಳಲ್ಲಿ ಸ್ವಲ್ಪ ಪ್ರಗತಿಯಾಗಿದ್ದರೂ, ಅಮೆರಿಕನ್ನರ ವಿಧಾನ, ಅವರು ಮಾಡಿದ ಅತಿಯಾದ ಬೇಡಿಕೆಗಳು ಮತ್ತು ಅವರ ತಪ್ಪು ವಿಧಾನಗಳಿಂದಾಗಿ ಮಾತುಕತೆಗಳು ತಮ್ಮ ಉದ್ದೇಶಗಳನ್ನು ತಲುಪಲು ವಿಫಲವಾದವು. ಆದ್ದರಿಂದ, ಇತ್ತೀಚಿನ ಪರಿಸ್ಥಿತಿಯನ್ನು ಪರಿಶೀಲಿಸಲು ಪಾಕಿಸ್ತಾನದಲ್ಲಿರುವ ನಮ್ಮ ಸ್ನೇಹಿತರೊಂದಿಗೆ ಸಮಾಲೋಚಿಸುವುದು ಅಗತ್ಯವಾಗಿತ್ತು' ಎಂದು ಅರಾಘ್ಚಿ ಹೇಳಿದರು.

ಅರಾಘ್ಚಿ ಮೂರು ದಿನಗಳ ಅಂತರದಲ್ಲಿ ಎರಡನೇ ಸಲ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಬಳಿಕ ಶನಿವಾರದಂದು ಒಮಾನ್‌ಗೆ ಭೇಟಿ ನೀಡಿದ್ದರು. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಸೇನಾ ಮುಖ್ಯಸ್ಥ ಹಾಗೂ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹಾಗೂ ಇತರೆ ಉನ್ನತ ಅಧಿಕಾರಗಳೊಂದಿಗೆ ಮಾತುಕತೆ ನಡೆಸಿ ಬಳಿಕ ಒಮಾನ್‌ಗೆ ಪ್ರಯಾಣಿಸಿ ಇಸ್ಲಾಮಾಬಾದ್‌ಗೆ ಮರಳಿದ್ದರು. ಸದ್ಯ ಪಾಕಿಸ್ತಾನ ಮತ್ತು ಒಮನ್ ಪ್ರಯಾಣ ಮುಗಿಸಿ ಇದೀಗ ರಷ್ಯಾಕ್ಕೆ ತೆರಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries