HEALTH TIPS

'ಇರಾನ್‌ ಬಳಿ ಪರಮಾಣು ಶಸ್ತ್ರಾಸ್ತ್ರ ಇರಬಾರದು': ಪೋಪ್ ಲಿಯೋ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

 ಇರಾನ್ ವಿಚಾರವಾಗಿ ಪೋಪ್ ಲಿಯೋ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಟ್ರೂತ್ ಸೋಶಿಯಲ್‌ನಲ್ಲಿ ಮತ್ತೊಂದು ಹೇಳಿಕೆ ನೀಡಿದ್ದಾರೆ. 


"ಇರಾನ್ ಕಳೆದ ಎರಡು ತಿಂಗಳಲ್ಲಿ ಕನಿಷ್ಠ 42,000 ನಿರಾಯುಧ ಪ್ರತಿಭಟನಾಕಾರರನ್ನು ಹತ್ಯೆ ಮಾಡಿದೆ.

ಇರಾನ್ ಬಳಿ ಪರಮಾಣು ಬಾಂಬ್ ಇರಬಾರದು. ಈ ವಿಷಯವನ್ನು ಪೋಪ್ ಲಿಯೋ ಗಮನಿಸಬೇಕು," ಎಂದು ಟ್ರಂಪ್ ಅವರು ಹೇಳಿದ್ದಾರೆ.

"ಅಮೆರಿಕ ಹಿಂತಿರುಗಿದೆ!" ಎಂದೂ ಅವರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಪ್ ಲಿಯೋ ಅವರನ್ನು "ಅಪರಾಧದ ಮೇಲೆ ದುರ್ಬಲ" ಹಾಗೂ "ವಿದೇಶಾಂಗ ನೀತಿಯ ಮೇಲೆ ಭಯಾನಕ" ಎಂದು ಟೀಕಿಸಿದ್ದರು.

ಅಮೆರಿಕದಲ್ಲಿ ಜನಿಸಿದ ಮೊದಲ ಪೋಪ್ ಆಗಿರುವ ಪೋಪ್ ಲಿಯೋ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ಟೀಕಿಸಿದ್ದರು. ಇದಾದ ಬಳಿಕ ಇಬ್ಬರ ನಡುವಿನ ವಾಗ್ವಾದ ತೀವ್ರಗೊಂಡಿದೆ.

ಟ್ರಂಪ್ ಆಡಳಿತದ ಬಗ್ಗೆ "ನನಗೆ ಯಾವುದೇ ಭಯವಿಲ್ಲ" ಎಂದು ಪೋಪ್ ಲಿಯೋ ಹೇಳಿದ್ದಾರೆ. ಯುದ್ಧದ ಭೀಕರತೆಯನ್ನು ಖಂಡಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಇನ್ನೊಂದೆಡೆ, ಜನವರಿಯಲ್ಲಿ ಇರಾನ್‌ನಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆಗಳ ವೇಳೆ 42,000 ಜನರು ಮೃತಪಟ್ಟಿದ್ದಾರೆ ಎಂಬ ಟ್ರಂಪ್ ಹೇಳಿಕೆಗೆ ಸ್ಪಷ್ಟ ಆಧಾರಗಳು ಲಭ್ಯವಿಲ್ಲ. ಇರಾನ್ ಸರಕಾರದ ಪ್ರಕಾರ 3,117 ಜನರು ಮೃತಪಟ್ಟಿದ್ದಾರೆ. ದೇಶದ ಹೊರಗಿನ ಕೆಲವು ಸಂಘಟನೆಗಳು ಈ ಸಂಖ್ಯೆಯನ್ನು ಸುಮಾರು 7,007 ಎಂದು ಅಂದಾಜಿಸಿವೆ.

ಇರಾನ್ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರ ಮೈ ಸೊಟೊ ಅವರ ಪ್ರಕಾರ ಕನಿಷ್ಠ 5,000 ಜನರು ಮೃತಪಟ್ಟಿದ್ದು, ನಿಜವಾದ ಸಾವಿನ ಸಂಖ್ಯೆ 20,000ರಷ್ಟಿರಬಹುದೆಂದು ಅಂದಾಜಿಸಲಾಗಿದೆ.








ಇದೇ ವೇಳೆ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries