HEALTH TIPS

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕಕ್ಕೆ ಚಾಲನೆ, ಉಗ್ರಾಣ ಮುಹೂರ್ತ

ಕಾಸರಗೋಡು: ನಗರದ  ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಪುನ: ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಪರಿವಾರ ದೈವದೇವರುಗಳ ಪ್ರತಿಷ್ಠೆ,  ಶ್ರೀ ಗುಳಿಗ ಹಾಗೂ ಶ್ರೀ ಕೊರಗಜ್ಜನ ದೈವದ ಜೋಡಿಕೋಲ, ವಿವಿಧ ವೈದಿಕ, ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಆರಂಭಗೊಂಡಿತು.  


ಬೆಳಗ್ಗೆ ನಡೆದ ಉಗ್ರಾಣ ಮುಹೂರ್ತವನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಪಾಕ ಪ್ರವೀಣ ಕೆ.ಎನ್.ರಾಮಕೃಷ್ಣ ಹೊಳ್ಳ , ಪ್ರಧಾನ ಅರ್ಚಕ ಯೋಗೀಶ, ಕ್ಷೇತ್ರ ಮೊಕ್ತೇಸರ ಅಚ್ಚುತ್ತ ಕಾಳ್ಯಂಗಾಡು,  ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲ್, ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡ್, ಕೋಶಾಧಿಕಾರಿ ಶಾಂತ ಕುಮಾರ್ ಮುಂಡ್ಯತ್ತಡ್ಕ, ರಘು ಮೀಪುಗುರಿ, ಮೋಹನ್ ರಾಜ್, ಪುಷ್ಪಾವತಿ ಮಹಾಲಿಂಗ ಮೊದಲಾದವರು ಉಪಸ್ಥಿತರಿದ್ದರು

ಏ. 26ರಿಂದ ಮೇ 2ರ ವರೆಗೆ ಕ್ಷೇತ್ರದ ತಂತ್ರಿವರ್ಯರಾದ  ಶ್ರೀಕೃಷ್ಣ ಗುರೂಜಿ ನೇತೃತ್ವದಲ್ಲಿ ಆಗಮೋಕ್ತ ವಿಧಿಗಳೊಂದಿಗೆ ಜರಗಲಿರುವುದು.  

27ರಂದು ಮೂಕಾಂಬಿಕಾ ವೇದಿಕೆಯಲ್ಲಿ ಸಂಜೆ 5ಕ್ಕೆ ಎಡನೀರು  ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ಸಾಂಸ್ಕøತಿಕ-ಧಾರ್ಮಿಕ ಕಾರ್ಯಕ್ರಮಗಳ ಉದ್ಘಾನೆ ನೆರವೇರಿಸುವರು.  ಏ. 29ರಂದು  ಬೆಳಗ್ಗೆ  9.48ರಿಂದ 11.25 ವರೆಗೆ ಮಿಥುನ ಲಗ್ನ ಸುಮುಹೂರ್ತದಲ್ಲಿ  ಶ್ರೀ ದೇವಿಯ ಪ್ರತಿಷ್ಠೆ, ಜೀವಕಲಶಾಭಿಷೇಕ, ಮಹಾಪೂಜೆ, ಮಂಗಳಾರತಿ, ಕವಾಟಬಂಧನ ನಡೆಯುವುದು.  ಏ. 30ರಂದು ಬೆಳಗ್ಗೆ 9.30ರಿಂದ 11.00 ಗಂಟೆಯ ತನಕ ಒದಗುವ ಶುಭ ಮುಹೂರ್ತದಲ್ಲಿ  ಬ್ರಹ್ಮಕಲಶಾಭಿಷೇಕ ನಡೆಯುವುದು.   

ಮೇ 1ರಂದು ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ  ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ  ಆಶೀರ್ವಚನ ನಿಡುವರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. 2ರಂದು ಸಂಜೆ 5ಕ್ಕೆ ಭಂಡಾರ ಮನೆಯಿಂದ ಭಂಡಾರ ಆಗಮನ, 6ಕ್ಕೆ ಗುಳಿಗ ದೈವದ ಕೋಲ, ರಾತ್ರಿ 8ಕ್ಕೆ ಶ್ರೀಕೊರಗತನಿಯ ದೈವದ ಜೋಡಿ ಕೋಲ ನಡೆಯಲಿರುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries