ಕುಂಬಳೆ: ಬಂದ್ಯೋಡು ಮಲ್ಲಂಗೈ ನಿವಾಸಿ ದಿ. ಮುಹಮ್ಮದ್ ಹಾಜಿ-ಆಯಿಷ ಹಜ್ಜುಮ್ಮ ದಂಪತಿಯ ಪುತ್ರ ಮುಹಮ್ಮದ್ ಫಾರೂಕ್ (48) ಸೌದಿ ಅರೇಬಿಯಾದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಕಳೆದ 22 ವರ್ಷಗಳಿಂದ ಸೌದಿ ಅರೇಬಿಯಾದ ಅಬಹದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ವಾಸಸ್ಥಳದಲ್ಲಿ ಕುಸಿದು ಬಿದ್ದಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಹಮ್ಮದ್ ಫಾರೂಕ್ ಮೃತಪಟ್ಟಿರುವ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ. ಮೃತದೇಹವನ್ನು ಊರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ಊರಿಗೆ ಬಂದಿದ್ದ ಮುಹಮ್ಮದ್ ಫಾರೂಕ್ ಈದುಲ್ ಫಿತ್ರ್ ಹಬ್ಬದ ನಂತರ ತೆರಳಿದ್ದರು.

