ಕಾಸರಗೋಡು: ಮನೆ ಸಾರಣೆ ಕೆಲಸದ ಮಧ್ಯೆ ಮನೆಯಲ್ಲಿದ್ದ ಬಾಲಕಿಗೆ ಕಿರುಕುಳಕ್ಕೆ ಯತ್ನಿಸಿದ್ದ ತ್ರಿಕ್ಕರಿಪುರ ಎಡಾಟ್ಟುಮ್ಮಲ್ ನಿವಾಸಿ ರಾಘವನ್(52) ಎಂಬಾತನನ್ನು ಪಯ್ಯನ್ನೂರು ಠಾಣೆ ಇನ್ಸ್‍ಪೆಕ್ಟರ್ ಟಿ. ರಾಜೇಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ.
ಇತ್ತೀಚೆಗೆ ಪುಯ್ಯನ್ನೂರು ಪೆÇಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಸಾರನೆ ಕೆಲಸ ನಡೆಸುತ್ತಿದ್ದ ಸಂದರ್ಭ ಮೇಳಿನ ಮಹಡಿಗೆ ಆಗಮಿಸಿದ ಬಾಲಕಿಗೆ ಕಿರುಕುಳಕ್ಕೆ ಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿ ಈ ಬಗ್ಗೆ ತಾಯಿಯಲ್ಲಿ ನೀಡಿದ ಮಾಹಿತಿಯನ್ವಯ ಪೆÇಲೀಸರಿಗೆ ದೂರು ನೀಡಲಾಗಿತ್ತು. ರಾಘವನ್ ಈ ಹಿಂದೆಯೂ ಇಂತಹ ಕೃತ್ಯ ಎಸಗಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

