ಕಾಸರಗೋಡು: ಕೋಟ್ಯಂತರ ರೂಪಾಯಿ ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಬೇಡಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಳತ್ತುಪುಳ ನೆಲ್ಲಿಮೂಡ್ ಕಾಳಿಲ್‍ವೀಟಿಲ್ ನಿವಾಸಿ ಶೀಬಾ ಎಸ್(48)ಹಾಗೂ ಕುರಿಯನ್ ಮ್ಯಾಥ್ಯೂ ಯಾನೆ ವೀಪಿ(37)ಬಂಧಿತರು. ಶೀಬಾಳನ್ನು ಕೊಲ್ಲಂನಿಂದ ಹಾಗೂ ಕುರಿಯನ್ ಮ್ಯಾಥ್ಯೂವನ್ನು ಕೋಟಟಾಯಂ ಜಿಲ್ಲೆಯ ಮಣ್ಣಾರ್‍ಕಾಡ್ ಎಂಬಲ್ಲಿಂದ ಬಂಧಿಸಲಾಗಿದೆ. ಇವರಿಬ್ಬರೂ ತಲೆಮರೆಸಿಕೊಂಡಿದ್ದರು. ಇವರ ವಿರುದ್ಧ ಕೇರಳ ಹಾಗೂ ಇತರ ರಾಜ್ಯಗಳಲ್ಲಿ ವಂಚನಾ ಪ್ರಕರಣದ ಹಲವುಕೇಸು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬೇಡಡ್ಕ ಠಾಣೆ ಇನ್ಸ್‍ಪೆಕ್ಟರ್ ವಿನೋದ್ ಕುಮಾರ್ ನಿರ್ದೇಶ ಪ್ರಕಾರ ಗ್ರೇಡ್ ಸೀನಿಯರ್ ಸಿವಿಲ್ ಪೆÇಲೀಸ್ ಆಫೀಸರ್ ರಜೀಶ್ ತಾರಂತಟ್ಟ, ಸಿವಿಲ್ ಪೆÇಲೀಸ್ ಆಫೀಸರ್ ಸಂದೀಪ್, ಮಹಿಳಾ ಸಿವಿಲ್ ಪೋಲೀಸ್ ಆಫೀಸರ್ ಅನಿತಾ ಎಂಬಿವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

