ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರಗುತ್ತಿದ್ದು ವಿವಿಧೆಡೆಗಳಿಂದ ಹೊರೆಕಾಣಿಕೆ ಸುವಸ್ತುಗಳು ಹರಿದುಬರುತ್ತಿವೆ. ಭಾನುವಾರ ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು. ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಡಾ. ಶ್ರೀನಿಧಿ ಸರಳಾಯ, ಜಗನ್ನಾಥ ರೈ ಕೊರೆಕ್ಕಾನ, ರಮೇಶ್ ಮುಳಿಯಡ್ಕ, ಆನಂದ ಬೈಕುಂಜೆ, ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ರಾಮ ನಾಯ್ಕ ಕುಂಟಾಲುಮೂಲೆ, ಶಿವರಾಮ ವಾಂತಿಚ್ಚಾಲು, ಹರೀಶ ಉಪ್ಲೇರಿ, ಸುಮಂಗಿಲಿನಿ ಮಾತೃಸಂಘದ ಸದಸ್ಯರು, ಗ್ರಾಮಸ್ಥರು, ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನೇತೃತ್ವ ವಹಿಸಿದ್ದರು.

.jpg)
