ಮುಳ್ಳೇರಿಯ: ಮುಳ್ಳೇರಿಯ ಪೇಟೆಯಲ್ಲಿ ಇತ್ತೀಚೆಗೆ ನಡೆದ ಘರ್ಷಣೆಗೆ ಸಂಬಂಧಿಸಿ ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯ, ಮುಳ್ಳೇರಿಯ ನಿವಾಸಿ, ಮುಳ್ಳೇರಿಯ ಪೇಟೆಯಲ್ಲಿ ಟೈಲ್ಸ್ ವ್ಯಾಪಾರಿಯಾಗಿರುವ ಎಂ. ಶರೀಫ್ (42)ನನ್ನು ಆದೂರು ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಕಾರಡ್ಕ ಪಂಚಾಯತ್ 12ನೇ ವಾರ್ಡ್ ಬಳಕ್ಕದ ಮುಸ್ಲಿಂ ಲೀಗ್ ಸದಸ್ಯನಾಗಿರುವ ಶೆರೀಫ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮಾರ್ಚ್ 5ರಂದು ಮುಳ್ಳೇರಿಯ ಜುಮಾ ಮಸೀದಿ ಸನಿಹ ತಂಡವೊಂದು ಯುವಕರನ್ನು ತಡೆದು ನಿಲ್ಲಿಸಿ ಆಕ್ರಮಿಸಿರುವ ಬಗ್ಗೆ ಆದೂರು ಪೂತಪ್ಪಲದ ಮುಹಮ್ಮದ್ ರೈಸ್ (18)ಅವರ ದೂರಿನನ್ವಯ ಶರೀಫ್, ರಮೀಸ್, ರಿಯಾಸ್, ಆಶಿಕ್, ಮುಸ್ತಾಕ್ ಸೇರಿದಂತೆ 15 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರು.

