ಮಂಜೇಶ್ವರ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನನ್ನು ಹಾದಿಮಧ್ಯೆ ತಡೆದು ನಿಲ್ಲಿಸಿ ಮಾರಕಾಯುಧಗಳಿಂದ ಹೊಡೆದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವರ್ಕಾಡಿ ಕಳಿಯೂರಿನ ಪಡ್ಪಿನಕೆರೆ ನಿವಾಸಿ ರಾಕೇಶ್ (37)ಅವರಿಗೆ ಹಲ್ಲೆಗೈದ ಆರೋಪದಂತೆ ವರ್ಕಾಡಿ ನಿವಾಸಿಗಳಾದ ಅನಿಲ್, ಅಶ್ವಿನ್, ಅಭಿಷೇಕ್, ಮನೋಜ್ ಎಂಬವರಿಗೆ ಈ ಕೇಸು. ಏ. 11ರಂದು ರಾತ್ರಿ ವರ್ಕಾಡಿ ಬೇರಿಕೆ ಜಂಕ್ಷನ್ ಪಿ.ಸಿ ರೋಡ್‍ನಲ್ಲಿ ಸ್ಕೂಟರ್ ಹಾಗೂ ಆಟೋ ರಿಕ್ಷಾದಲ್ಲಿ ಬಂದ ತಂಡ ರಾಕೇಶ್ ಅವರನ್ನು ತಡೆದು ನಿಲ್ಲಿಸಿ ಕತ್ತಿ, ರಾಡ್, ಬ್ಯಾಟ್ ಸಹಿತ ಮಾರಕಾಯುಧಗಳಿಂದ ಹಲ್ಲೆಗೈದು, ಕೊಲೆಬೆದರಿಕೆ ಒಡ್ಡಿ ತಂಡ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಕಾಲಿಗೆ ಗಂಭೀರ ಗಾಯಗೊಂಡ ರಾಕೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

