HEALTH TIPS

ಸಿಇಸಿ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಪ್ರತಿಪಕ್ಷಗಳಿಂದ ಮತ್ತೆ ನೋಟಿಸ್

 ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿ ಕೋರಿ ವಿರೋಧ ಪಕ್ಷಗಳು ಎರಡನೇ ಬಾರಿಗೆ ನೋಟಿಸ್ ಸಲ್ಲಿಸಿವೆ.


ರಾಜ್ಯಸಭೆಯ 73 ಸಂಸದರು ಸಹಿ ಮಾಡಿದ ಹೊಸ ನೋಟಿಸ್ ಅನ್ನು ಪ್ರತಿಪಕ್ಷಗಳು ಶುಕ್ರವಾರ ಸಲ್ಲಿಸಿವೆ. ರಾಜ್ಯಸಭೆ ಕಾರ್ಯದರ್ಶಿಗೆ ನೋಟಿಸ್ ಸಲ್ಲಿಕೆ ಮಾಡಲಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ಪಕ್ಷಪಾತ ಮತ್ತು ತಾರತಮ್ಯ ಮಾಡುತ್ತಿದ್ದಾರೆ ಎಂದು ಅರೋಪಿಸಿ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಆದರೆ ಅದನ್ನು ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿ ತಿರಸ್ಕರಿಸಿದ್ದರು.

ಇದಗಿ ಕೆಲವೇ ದಿನಗಳಲ್ಲಿ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿಗೆ ಕೋರಿ ಎರಡನೇ ನೋಟಿಸ್ ಸಲ್ಲಿಸಲು ಪ್ರತಿಪಕ್ಷಗಳು ಯೋಜಿಸಿದ್ದವು. ಇದೀಗ ಎರಡನೇ ಬಾರಿಗೆ ನೋಟಿಸ್ ನೀಡಲಾಗಿದೆ.

ಸಿಇಸಿ ಪದಚ್ಯುತಿಗೆ ನೋಟಿಸ್ ಸಲ್ಲಿಸಲು ಲೋಕಸಭೆಯಲ್ಲಿ 100 ಮತ್ತು ರಾಜ್ಯಸಭೆಯಲ್ಲಿ 50 ಸಹಿಗಳ ಅಗತ್ಯತವಿದೆ.

ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ಮಾರ್ಚ್ 12 ರಂದು ಸಲ್ಲಿಸಲಾಗಿದ್ದ ನೋಟಿಸ್‌ಗಳಲ್ಲಿ, ಲೋಕಸಭೆಯ 130 ಮತ್ತು ರಾಜ್ಯಸಭೆಯ 63 ಸಂಸದರು ಸಹಿ ಹಾಕಿದ್ದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries