HEALTH TIPS

ಕಣಿಪುರದಿಂದ ಪೆರಡಾಲ ಬ್ರಹ್ಮಕಲಶಕ್ಕೆ ಹೊರೆಕಾಣಿಕೆ ಸಮರ್ಪಣೆ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭಾನುವಾರ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಕುಂಬಳೆ ಸೀಮೆಯ ಪ್ರಧಾನ ದೇವಸ್ಥಾನದಿಂದ ಆಗಮಿಸಿದ ಸುವಸ್ತುಗಳನ್ನು ಶ್ರೀ ಕ್ಷೇತ್ರದ ವತಿಯಿಂದ ಭಕ್ತಿಪೂರ್ವಕ ಸ್ವೀಕರಿಸಲಾಯಿತು. ಶ್ರೀದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಪ್ರಸಾದ ನೀಡಲಾಯಿತು. 


ವೈದಿಕ ಕಾರ್ಯಕ್ರಮಗಳು :

ಪ್ರಾತಃಕಾಲ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮಗಳು, ಪ್ರೋಕ್ತ ಹೋಮ, ಚತುಃಶುದ್ಧಿ, ಧಾರಾ, ಅವಗಾಹ, ಪಂಚಕ, ಅಂಕುರ ಪೂಜೆ, ಮಹಾಪೂಜೆ, ಸಂಜೆ ಹೋಮ ಕಲಶಾಭಿಷೇಕ, ಅಂಕುರ ಪೂಜೆ ನಡೆಯಿತು.

ಸಾಂಸ್ಕøತಿಕ ಕಾರ್ಯಕ್ರಮಗಳು : 

ಪೂರ್ವಾಹ್ನ ನಟರಾಜ ವೇದಿಕೆಯಲ್ಲಿ ನಂದಿತಾ ಪೈ ಮತ್ತು ಬಳಗ ಮಂಗಳೂರು ಇವರಿಂದ ಹಿಂದೂಸ್ಥಾನಿ ಸಂಗೀತ ಮತ್ತು ಭಜನ್, ಅನ್ವಿತಾ ಕೈಪಂಗಳ ಇವರಿಂದ ನೃತ್ಯ ಕಾರ್ಯಕ್ರಮ, ಸಮನ್ವಿತಾ ಗಣೇಶ್ ಅಣಂಗೂರು ಇವರಿಂದ ಭಕ್ತಿ ತರಂಗಿಣಿ, ಮಧ್ಯಾಹ್ನ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸವಾಣಿ, ಪ್ರಸಿದ್ಧ ಯುವಗಾಯಕ ರಾಹುಲ್ ವೆಳ್ಳಾಲ್ ಮತ್ತು ಬಳಗದವರಿಂದ ಸಂಗೀತ ಸಂಧ್ಯಾ, ವಿದುಷಿ ಡಾ. ವಿದ್ಯಾಲಕ್ಷ್ಮಿ ಕೆ.ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ನಡೆಯಿತು. ಕೈಲಾಸ ವೇದಿಕೆಯಲ್ಲಿ ಪ್ರತಿಭಾ ಕೃಷ್ಣಮೂರ್ತಿ ಪುದುಕೋಳಿ ಹಾಗೂ ಅಚಿಂತ್ಯ ಪುದುಕೋಳಿ ಇವರಿಂದ ಹಾಗೂ ಅಶ್ವಿನಿರಾಜ್ ಪಟ್ಟಾಜೆ ಶ್ರೀ ದುರ್ಗಾ ಸಂಗೀತ ಶಾಲೆ ಇವರಿಂದ ಶಾಸ್ತ್ರೀಯ ಸಂಗೀತ, ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಸಂಘ ಬಾಯಾರುಪದವು ಇವರಿಂದ ತಾಳಮದ್ದಳೆ, ಸುರೇಶ್ ಗಿನ್ನೆಸ್ ಜಯನಗರ ಇವರಿಂದ ಮಿಮಿಕ್ರಿ, ಕು.ಅಭಿಜ್ಞಾ ಭಟ್ ಬೊಳುಂಬು ಇವರಿಂದ ಹರಿಕಥಾ ಸತ್ಸಂಗ, ಕೀರ್ತನಾ ಮತ್ತು ನಂದನಾ ಇವರಿಂದ ಜಾನಪದ ನೃತ್ಯ, ಸಂಜೆ ವಿದುಷಿ ವಿದುಷಿ ಡಾ. ನಿಶಿತಾ ಪುತ್ತೂರು ಇವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.

ಇಂದು (ಏ.20) ನಡೆಯುವ ಕಾರ್ಯಕ್ರಮಗಳು:

ಪ್ರಾತಃಕಾಲ ಗಣಪತಿ ಹೋಮ, ಶಾಂತಿ ಹೋಮಗಳು, ದಹನ ಪ್ರಾಯಶ್ಚಿತ್ತ, ಅಂಕುರ ಪೂಜೆ, ತ್ರಿಕಾಲ ಪೂಜೆ, ಮಹಾಪೂಜೆ ನಡೆಯಲಿದೆ. ಸಂಜೆ ಹೋಮಕಲಶಾಭಿಷೇಕ,ಅಂಕುರ ಪೂಜೆ, ತ್ರಿಕಾಲ ಪೂಜೆ, ಅನುಜ್ಞಾಕಲಶ ಪೂಜೆ, ಅಧಿವಾಸ ಹೋಮ,ಕಲಶಾಧಿವಾಸ ನಡೆಯಲಿದೆ. 

ನಟರಾಜ ವೇದಿಕೆಯಲ್ಲಿ : 

ಬೆಳಗ್ಗೆ 9.30 ರಿಂದ ಪ್ರಕಾಶ ಆಚಾರ್ಯ ಕುಂಟಾರು ಮತ್ತು ಬಳಗದವರಿಂದ ಭಕ್ತಿರಸಮಂಜರಿ, ಅಶ್ವಿನಿ ರಾಜ್‍ಪಟ್ಟಾಜೆ ಮತ್ತು ಬಳಗ, ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯ ಉಡುಪಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, ಅಪರಾಹ್ನ 2ಕ್ಕೆ ವಿದುಷಿ ಸ್ವಾತಿ ಭಟ್ ಇವರ ಶಿಷ್ಯರಿಂದ ಹಾಗೂ ಮಿಥುನ್ ಇವರಿಂದ ಭರತನಾಟ್ಯ, 4ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಶ್ರೀ ಸುಬ್ರಹ್ಮಣ್ಯ ಮಠ ಇವರಿಂದ ಆಶೀರ್ವಚನ ನಡೆಯಲಿದೆ. ಸಂಜೆ 7 ರಿಂದ ಕೇರಳ ಮರಾಟಿ ಶಾರದೋತ್ಸವ ಮಹಿಳಾ ಸಮಿತಿ ಬದಿಯಡ್ಕ ಇವರಿಂದ ಸಂಘನೃತ್ಯ, 7.15 ರಿಂದ ರಾಜ್ ಬ್ರದರ್ಸ್ ಪಟ್ಟಾಜೆ ಇವರಿಂದ ಣರತನಾಟ್ಯ, ರಾತ್ರಿ 8 ರಿಂದ ಶ್ರೀ ಉದನೇಶ್ವರ ಕಲಾಸಂಘ ಪೆರಡಾಲ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಪಂಚಕಲ್ಯಾಣ ಪ್ರದರ್ಶನಗೊಳ್ಳಲಿದೆ. 

ಕೈಲಾಸ ವೇದಿಕೆಯಲ್ಲಿ: 

ಬೆಳಗ್ಗೆ 10ಕ್ಕೆ ಧನ್ಯಶ್ರೀ ಮತ್ತು ಸರೋಜಿನಿ ಎಂ ನಾರಾಯಣ ಮಂಗಲ ಇವರಿಂದ ಹರಿಕಥೆ, 11ಕ್ಕೆ ಕು. ರಕ್ಷಾ ಭಟ್ ಮತ್ತು ಕು.ಶ್ರೀಜಾ ಭಟ್ ಕೋರಿಕ್ಕಾರು ಬೆಂಗಳೂರು ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, 12ಕ್ಕೆ ಸುರೇಂದ್ರ ಆಚಾರ್ಯ ಕಾಸರಗೋಡು ಮತ್ತು ಚಿತ್ರ ಸರವು ಇವರಿಂದ ಕೊಳಲುವಾದನ, 1ಕ್ಕೆ ಹೃದ್ಯಾ ಭಟ್ ಕೋಡಿಮೂಲೆ ಮತ್ತು ರೂಪಶ್ರೀ ಕೆ.ಎಸ್. ಇವರಿಂದ ನೃತ್ಯ ವೈವಿಧ್ಯ, ಅಪರಾಹ್ನ 2 ರಿಂದ ಶ್ರೀ ಶಾರದಾಂಬಾ ಯಕ್ಷಗಾನ ಕಲಾಸಂಘ ಕುಂಟಾಲುಮೂಲೆ ಇವರಿಂದ ಯಕ್ಷಗಾನ, ಸಂಜೆ 5 ರಿಂದ ಪೂರ್ಣಶ್ರೀ ಸಾರಡ್ಕ, 6 ರಿಂದ ಅಶ್ವಿನಿ ಭಟ್ ಮೊಳೆಯಾರು ಮತ್ತು ಬಳಗ, 7 ರಿಂದ ಅಂಕಿತಾ ಮತ್ತು ಬಳಗದವರಿಂದ ಭರತಾನಾಟ್ಯ, ಸಂಜೆ 6ಕ್ಕೆ ಶ್ರೀ ಉದನೇಶ್ವರ ಮಾತೃಮಂಡಳಿ ಇವರಿಂದ ಕೈಕೊಟ್ಟಿಕಳಿ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries