HEALTH TIPS

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಸೊಕ್ಕು ಮುರಿದಿದೆ, ಅವಮಾನಕ್ಕೊಳಗಾಗಿದೆ: ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್

 ಮಾರ್ಸ್‌ಬರ್ಗ್ : ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕದ ಸೊಕ್ಕು ಮುರಿದಿದ್ದು, ಅವಮಾನಕ್ಕೊಳಗಾಗಿದೆ ಎಂದು ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಹೇಳಿದ್ದಾರೆ. ಈ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿರುವುದರಿಂದ, ಅಮೆರಿಕಕ್ಕೆ ಯುದ್ಧದಿಂದ ಹೊರಬರಲು ಸ್ಪಷ್ಟ ದಾರಿ ಕಾಣುತ್ತಿಲ್ಲ ಎಂದು ಅವರು ಎಚ್ಚರಿಸಿದ್ದಾರೆ ಎಂದು ಂಟರಿಚಿzeeಡಿಚಿ ವರದಿ ಮಾಡಿದೆ. 


ಸೋಮವಾರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಇಂತಹ ಯುದ್ಧಗಳು ದೀರ್ಘಕಾಲದ ಸಂಕಷ್ಟಗಳಿಗೆ ಕಾರಣವಾಗುತ್ತವೆ. "ಯುದ್ಧ ರಂಗಕ್ಕೆ ನುಗ್ಗುವುದು ಸುಲಭ; ಆದರೆ ಅದರಿಂದ ಹೊರಬರುವುದು ಕಷ್ಟ. ನಾವು ಇದನ್ನು ಅಫ್ಘಾನಿಸ್ತಾನ ಯುದ್ಧ ಮತ್ತು ಇರಾಕ್ ಯುದ್ಧಗಳಲ್ಲಿ ಕಂಡಿದ್ದೇವೆ," ಎಂದು ಹೇಳಿದ್ದಾರೆ.

ಇರಾನ್ ನಾಯಕತ್ವ, ವಿಶೇಷವಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್, ಕೌಶಲ್ಯದಿಂದ ನಡೆದುಕೊಳ್ಳುತ್ತಿದ್ದು "ಸ್ಪಷ್ಟವಾಗಿ ಬಲಶಾಲಿಯಾಗಿ ಕಾಣುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ಇರಾನ್‌ ನ ಕ್ರಮಗಳಿಂದ ಅಮೆರಿಕದ ಗೌರವಕ್ಕೆ ಧಕ್ಕೆ ಉಂಟಾಗಿದೆ," ಎಂದು ಅವರು ಉಲ್ಲೇಖಿಸಿದ್ದಾರೆ.

ಯುದ್ಧವನ್ನು ಶೀಘ್ರ ಅಂತ್ಯಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಇದರ ಪರಿಣಾಮ ಜರ್ಮನಿಯ ಆರ್ಥಿಕತೆಯ ಮೇಲೂ ಬೀಳುತ್ತಿದೆ. "ಇದು ಅವ್ಯವಸ್ಥೆಯ ಪರಿಸ್ಥಿತಿ. ಈ ಯುದ್ಧ ನಮ್ಮ ಆರ್ಥಿಕ ಉತ್ಪಾದನೆಗೆ ಹೊರೆ ತಂದಿದೆ," ಎಂದು ಹೇಳಿದ್ದಾರೆ.

ಜಾಗತಿಕ ತೈಲ ಸಾಗಣೆಗೆ ಪ್ರಮುಖವಾದ ಹಾರ್ಮುಝ್ ಜಲಸಂಧಿ ಮಾರ್ಗದಲ್ಲಿ ಹಡಗುಗಳಿಗೆ ಭದ್ರತೆ ಒದಗಿಸಲು ಜರ್ಮನಿ ಮೈನ್‌ಸ್ವೀಪರ್ ಹಡಗುಗಳನ್ನು ನಿಯೋಜಿಸಲು ಸಿದ್ಧವಿದೆ. ಆದರೆ ಇದು ಯುದ್ಧದ ತೀವ್ರತೆ ಕಡಿಮೆಯಾಗುವುದರ ಮೇಲೆ ಅವಲಂಬಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂಧನ ಪೂರೈಕೆಯಲ್ಲಿ ಅಡಚಣೆ ಹಾಗೂ ಆರ್ಥಿಕ ಅಸ್ಥಿರತೆ ಬಗ್ಗೆ ಯುರೋಪಿನಲ್ಲಿ ಆತಂಕ ಹೆಚ್ಚುತ್ತಿದೆ.

ಇದೇ ವೇಳೆ, ಜರ್ಮನಿಯ ವಿದೇಶಾಂಗ ಸಚಿವ ಜೋಹಾನ್ ವಾಡೆಫುಲ್, "ಪರಮಾಣು ಬೆದರಿಕೆಗಳ ನಡುವೆ, ದಾಳಿಯನ್ನು ತಡೆಯಲು ಬಲವಾದ ವ್ಯವಸ್ಥೆ ಅಗತ್ಯ," ಎಂದು ಹೇಳಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries