HEALTH TIPS

ಕುರುಮುಜ್ಜಿಕಟ್ಟೆ ಭಜನ ಮಂದಿರದಲ್ಲಿ ಭಾಗವತ ಸಪ್ತಾಹಕ್ಕೆ ಹಸಿರುವಾಣಿ

ಬದಿಯಡ್ಕ: ಕುರುಮುಜ್ಜಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಏ.10 ರಿಂದ ಏ.16ರ ತನಕ ಜರಗಲಿರುವ ಶ್ರೀಮದ್ಭಾಗವತ ಸಪ್ತಾಹದ ಬಾಬ್ತು ಜರಗಿದ ಹಸಿರುವಾಣಿ ಕಾರ್ಯಕ್ರಮಕ್ಕೆ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಚಾಲನೆಯನ್ನು ನೀಡಲಾಯಿತು. ಶ್ರೀಮದ್ಭಾಗವತ ಸಪ್ತಾಹ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ದೀಪಬೆಳಗಿಸಿದರು. ಸಂಚಾಲಕ ಶ್ರೀಕೃಷ್ಣ ಭಟ್ ಬಳಕ್ಕ, ಕೋಶಾಧಿಕಾರಿ ಕೃಷ್ಣ ಮಣಿಯಾಣಿ ಅಗಲ್ಪಾಡಿ, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಜಯನಗರ, ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ಕೆ.ವಿ.ರಮೇಶ ಶರ್ಮ, ಭಜನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣನ್ ನಾಯರ್ ಉಪ್ಪಂಗಳಮೂಲೆ, ಶ್ರೀಮಂದಿರದ ಗುರುಸ್ವಾಮಿ ನಾರಾಯಣ, ಸೇವಾಸಮಿತಿಯ ಗೌರವಾಧ್ಯಕ್ಷ ಪವಿತ್ರನ್ ಕುರುಮುಜ್ಜಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳಾದ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ರಮೇಶ್ ಕೃಷ್ಣ ಪದ್ಮಾರು ವಂದಿಸಿದರು. ಹಸಿರುವಾಣಿಯನ್ನು ವಾಹನದ ಮೂಲಕ ಕೊಂಡೊಯ್ಯಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries