HEALTH TIPS

ಕಣ್ಣೂರು: ವಿದ್ಯಾರ್ಥಿ ಆತ್ಮಹತ್ಯೆ: ಪ್ರಾಧ್ಯಾಪಕರ ಕಿರುಕುಳ ಕಾರಣವೆಂದು ಕುಟುಂಬದ ಆರೋಪ

ಕಣ್ಣೂರು: ಶಂಕಿತ ಆತ್ಮಹತ್ಯೆ ಪ್ರಕರಣದಲ್ಲಿ ಕಣ್ಣೂರಿನ ದಂತ ವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯೋರ್ವ ಕಟ್ಟಡದಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದು, ಚಕ್ಕರಕ್ಕಲ್ ಠಾಣಾ ಪೊಲೀಸರು ಪ್ರಾಧ್ಯಾಪಕರ ವಿರುದ್ಧ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ನಿತಿನ್ ರಾಜ್ ಆರ್.ಎಲ್. (22) ಪ್ರಾಧ್ಯಾಪಕರಿಂದ ಭಾವನಾತ್ಮಕ ಕಿರುಕುಳ ಅನುಭವಿಸಿದ್ದ ಎಂದು ಆತನ ಹೆತ್ತವರು ಮತ್ತು ಸ್ನೇಹಿತರು ಆರೋಪಿಸಿದ್ದಾರೆ.

ತಿರುವನಂತಪುರದ ಪುದುಕುಳಂಗರದ ಉಳಮಾಳಕಲ್ ನಿವಾಸಿ ರಾಜ್, ಇಲ್ಲಿನ ಅಂಜರಕಾಂಡಿಯ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿದ್ದ.

ಪೊಲೀಸರ ಪ್ರಕಾರ, ರಾಜ್ ಎ.10ರಂದು ಮೆಡಿಕಲ್ ಕಾಲೇಜು ಬ್ಲಾಕ್ ಬಳಿ ಕಟ್ಟಡದಿಂದ ಬಿದ್ದು ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತಕ್ಷಣ ಆತನನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಘಟನೆಯ ಬಳಿಕ ಆಂತರಿಕ ವಿಚಾರಣೆಯನ್ನು ಆರಂಭಿಸಿದ್ದ ಕಾಲೇಜು, ಶನಿವಾರ ಡೆಂಟಲ್ ಅನಾಟಮಿ ವಿಭಾಗದ ಮುಖ್ಯಸ್ಥ ಎಂ.ಕೆ. ರಾಮ ಮತ್ತು ಸಹ ಪ್ರಾಧ್ಯಾಪಕಿ ಕೆ.ಟಿ. ಸಂಗೀತಾ ನಂಬಿಯಾರ್ ಅವರನ್ನು ಅಮಾನತುಗೊಳಿಸಿದೆ.

ದೈಹಿಕ ಹಲ್ಲೆ ನಡೆಸುವ ಹಾಗೂ ಪರೀಕ್ಷೆಗಳಲ್ಲಿ ತನ್ನ ಅಂಕಗಳನ್ನು ಕಡಿಮೆ ಮಾಡುವ ಬೆದರಿಕೆ ಸೇರಿದಂತೆ, ತಾನು ಬೋಧಕ ವೃಂದದಿಂದ ಕಿರುಕುಳ ಎದುರಿಸುತ್ತಿದ್ದೇನೆ ಎಂದು ರಾಜ್ ತನ್ನ ಸ್ನೇಹಿತರಿಗೆ ಆಡಿಯೊ ಸಂದೇಶ ರವಾನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ವಿವರವಾದ ತನಿಖೆ ನಡೆಯುತ್ತಿದ್ದು, ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಚಕ್ಕರಕ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್‌ನ ಸಹಪಾಠಿಗಳು, ಕಾಲೇಜು ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಹೇಳಿಕೆಗಳನ್ನು ಶೀಘ್ರವೇ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ ತಂದೆ ರಾಜನ್, ತನ್ನ ಮಗನ ಕಪ್ಪು ಮೈಬಣ್ಣ ಮತ್ತು ಬಡ ಕುಟುಂಬದ ಹಿನ್ನೆಲೆಯ ಕಾರಣದಿಂದ ಪ್ರಾಧ್ಯಾಪಕರು ಭಾವನಾತ್ಮಕ ಮತ್ತು ಮೌಖಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries