ಬೆಂಗಳೂರು: ಗುಡ್ ಫ್ರೈಡೇ ಮತ್ತು ಈಸ್ಟರ್ ರಜಾದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ, ನೈಋತ್ಯ ರೈಲ್ವೆ ಬೆಂಗಳೂರಿನಿಂದ ಮಂಗಳೂರು ಮೂಲಕ ಕಣ್ಣೂರಿಗೆ ವಿಶೇಷ ಎಕ್ಸ್‍ಪ್ರೆಸ್ ರೈಲು ಘೋಷಿಸಿದೆ. ಎರಡೂ ಕಡೆಗಳಿಗೂ ಒಂದು ಸೇವೆಯನ್ನು ಒದಗಿಸಲಾಗುವುದು.
ರೈಲು 06551 - ಯಶವಂತಪುರ-ಕಣ್ಣೂರು: ರೈಲು ಏಪ್ರಿಲ್ 2 ರ ಗುರುವಾರ ಬೆಳಿಗ್ಗೆ 11.50 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 3 ಗಂಟೆಗೆ ಕಣ್ಣೂರು ತಲುಪಲಿದೆ.
ರೈಲು 06552 - ಕಣ್ಣೂರು-ಯಶವಂತಪುರ: ರೈಲು ಏಪ್ರಿಲ್ 3 ರ ಶುಕ್ರವಾರ ಬೆಳಿಗ್ಗೆ 8.45 ಕ್ಕೆ ಕಣ್ಣೂರಿನಿಂದ ಹೊರಟು ರಾತ್ರಿ 9.30 ಕ್ಕೆ ಯಶವಂತಪುರ ತಲುಪಲಿದೆ.
ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್, ಕಾಸರಗೋಡು, ಕಾಞಂಗಾಡ್ ಮತ್ತು ಪಯ್ಯನ್ನೂರುಗಳಲ್ಲಿ ನಿಲುಗಡೆ ಇರಲಿದೆ. ಬುಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

