ವಾಷಿಂಗ್ಟನ್: ಇರಾನ್ ಜೊತೆಗಿನ ಎರಡನೇ ಸುತ್ತಿನ ಮಾತುಕತೆಗಾಗಿ ಅಮೆರಿಕದ ಪ್ರತಿನಿಧಿಗಳು ನಾಳೆ ರಾತ್ರಿ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಒಪ್ಪಂದಕ್ಕೆ ಇರಾನ್ ಸಹಿ ಹಾಕದಿದ್ದರೆ ಕದನ ವಿರಾಮ ವಿಸ್ತರಿಸುವುದಿಲ್ಲ: ಟ್ರಂಪ್
ಈ ಬಗ್ಗೆ ಭಾನುವಾರ ತಮ್ಮ 'ಟ್ರುಥ್ ಸೋಶಿಯಲ್' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ನಾವು ಅತ್ಯಂತ ನ್ಯಾಯಯುತ, ಸಮಂಜಸವಾದ ಒಪ್ಪಂದವನ್ನು ಮುಂದಿಡಲಿದ್ದೇವೆ. ಅವರು ಇದನ್ನು ಒಪ್ಪುತ್ತಾರೆ ಎಂದು ನಾನು ಭಾವಿಸುವೆ. ಒಂದು ವೇಳೆ ಅವರು ಒಪ್ಪದಿದ್ದರೆ, ಇರಾನ್‌ನಲ್ಲಿರುವ ಪ್ರತಿಯೊಂದು ವಿದ್ಯುತ್ ಸ್ಥಾವರ, ಸೇತುವೆಯನ್ನು ಅಮೆರಿಕ ಧ್ವಂಸಗೊಳಿಸಲಿದೆ' ಎಂದು ಬೆದರಿಸಿದ್ದಾರೆ.

