HEALTH TIPS

ಸವಾಲು ಎದುರಿಸಲು ಭಾರತ ಶಕ್ತ: ಜೈಶಂಕರ್‌

 ರಾಯಪುರ: ಭಾರತವು ದೇಶೀಯ ಮತ್ತು ಬಾಹ್ಯ ಸವಾಲುಗಳ್ನು ಯಶಸ್ವಿಯಾಗಿ ಎದುರಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಶನಿವಾರ ಹೇಳಿದರು. 


ರಾಯಪುರ ಐಐಎಂನಲ್ಲಿ ನಡೆದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, 'ದೇಶದ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಿದ್ದ ಜಾಗತಿಕ ಸವಾಲನ್ನು ಭಾರತ ಸಮರ್ಥವಾಗಿ ಎದುರಿಸುತ್ತಿದೆ.

ಮುಖ್ಯವಾಹಿನಿಯಿಂದ ದೂರವಿರುವ ಸಮಾಜದ ಮೇಲೂ ಪಶ್ಚಿಮ ಏಷ್ಯಾ ಯುದ್ಧವು ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ. ಇದು ಜಾಗತೀಕರಣವು ವ್ಯಾಪಿಸಿರುವುದಕ್ಕೆ ಸಾಕ್ಷಿಯಾಗಿದೆ' ಎಂದು ಅಭಿಪ್ರಾಯಪಟ್ಟರು.

ಕೋವಿಡ್‌ ಸಾಂಕ್ರಾಮಿಕ, ಸಂಘರ್ಷ ಮತ್ತು ಹವಾಮಾನ ಬದಲಾವಣೆ- ಈ ದಶಕದಲ್ಲಿ ಎದುರಿಸುತ್ತಿರುವ ಮೂರು ಪ್ರಮುಖ ಸವಾಲುಗಳಾಗಿವೆ ಎಂದು ಹೇಳಿದರು.

ಇಂಥ ಸವಾಲುಗಳನ್ನು ಎದುರಿಸಲು ದೇಶದ ಸಾಮರ್ಥ್ಯವನ್ನು ಹೆಚ್ಚಿಸುವುದೊಂದೇ ದಾರಿ ಎಂದು ಅವರು ಪ್ರತಿಪಾದಿಸಿದರು.

ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಪ್ರಾತಿನಿಧಿಕ ರಾಜಕೀಯ ಮತ್ತು ನಿರ್ಣಾಯಕ ನಾಯಕತ್ವವು ದೇಶಕ್ಕೆ ನೂತನ ಅಡಿಪಾಯವನ್ನು ನೀಡಿದೆ ಎಂದು ಹೇಳಿದರು.

ಅಮೆರಿಕ ಮತ್ತು ಇಸ್ರೇಲ್‌ ಕಳೆದ ಫೆಬ್ರುವರಿಯಲ್ಲಿ ಇರಾನ್ ಮೇಲೆ ಯುದ್ಧ ಸಾರಿದ ಬಳಿಕ ಕಚ್ಚಾತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಜಾಗತಿಕವಾಗಿ ಪರಿಣಾಮ ಬೀರಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries