ಸಮರ್ಥ ಚೌಧರಿ ಸಿಎಂ ಹುದ್ದೆಯ ರೇಸ್ ನ ಮುಂಚೂಣಿಯಲ್ಲಿದ್ದಾರೆ.
ಬಿಜೆಪಿ ಶಾಸಕರು ತಮ್ಮ ನೂತನ ನಾಯಕನನ್ನು ಏಪ್ರಿಲ್ 14ರಂದು ಆಯ್ಕೆ ಮಾಡಲಿದ್ದು, ಅಂದು ಪಾಟ್ನಾಗೆ ಭೇಟಿ ನೀಡುವುದಾಗಿ ಚೌಹಾಣ್ ಹೇಳಿದ್ದಾರೆ. ಬಿಜೆಪಿಯ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಎನ್ ಡಿಎ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ ಹಾಗೂ ಅವರು ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಏಪ್ರಿಲ್ 15ರಂದು ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ಕೆಲ ಸದಸ್ಯರೊಂದಿಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನಿತೀಶ್ ಅವರ ಪುತ್ರ ನಿಶಾಂತ್ ಅವರನ್ನು ಜೆಡಿಯು ಉಪಮುಖ್ಯಮಂತ್ರಿ ಹುದ್ದೆಗೆ ಸೂಚಿಸುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಜೆಡಿಯು ಪಕ್ಷದ ಸಂಸ್ಥಾಪಕರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

