HEALTH TIPS

ವಿದೇಶಿ ದೇಣಿಗೆ ಮಾಹಿತಿಯನ್ನು 'ರಾಷ್ಟ್ರೀಯ ರಹಸ್ಯ'ವಾಗಿ ಪರಿಗಣನೆ: ಸರಕಾರಕ್ಕೆ ಸಂಸದ ಜಾನ್ ಬ್ರಿಟ್ಟಾಸ್ ತರಾಟೆ

ನವದೆಹಲಿ: ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA)ಗೆ ಸಂಬಂಧಿಸಿದಂತೆ ಸರಕಾರದ ನೀತಿ ನಿರ್ಧಾರಗಳ ಕುರಿತು ಪ್ರಾಥಮಿಕ ಮಾಹಿತಿಗಳನ್ನು ಕೋರುವ ಪ್ರಯತ್ನಗಳನ್ನು ತಡೆಯಲಾಗುತ್ತಿದೆ ಎಂದು ಹಿರಿಯ ಸಿಪಿಎಂ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಆರೋಪಿಸಿದ್ದಾರೆ.

ಈ ವಿಷಯ ಕುರಿತು ಸಂಸದೀಯ ಪ್ರಶ್ನೆಗಳನ್ನು ಈಗ 'ರಾಷ್ಟ್ರೀಯ ರಹಸ್ಯ'ವೆಂದು ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

2024ರಿಂದ ತಾನು FCRA ಅಮಾನತುಗಳು, ರದ್ದತಿಗಳು, ನವೀಕರಣ ನಿರಾಕರಣೆ, ಹೊಸ ನೋಂದಣಿಗಳು ಮತ್ತು FCRA ಡ್ಯಾಷ್‌ಬೋರ್ಡ್‌ನಿಂದ ಎನ್‌ಜಿಒವಾರು ಮಾಹಿತಿಗೆ ಸಾರ್ವಜನಿಕ ಪ್ರವೇಶವನ್ನು ತೆಗೆದುಹಾಕಿರುವ ಕುರಿತು ಸ್ಪಷ್ಟನೆಗಳನ್ನು ಕೋರಿ ಎಂಟು ಪ್ರಶ್ನೆಗಳನ್ನು ಸಲ್ಲಿಸಿದ್ದೇನೆ. ಆದರೆ ಈ ಪೈಕಿ ಒಂದಕ್ಕೂ ಉತ್ತರಿಸಲಾಗಿಲ್ಲ ಎಂದು ಬ್ರಿಟ್ಟಾಸ್ ಎಕ್ಸ್ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

FCRA ಪರವಾನಿಗೆ ರದ್ದತಿಗಳಿಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ರಹಸ್ಯ ಮಾಹಿತಿಯನ್ನು ಕೋರುವ ಪ್ರಶ್ನೆಗಳನ್ನು ನಿಷೇಧಿಸುವ ರಾಜ್ಯಸಭಾ ಕಲಾಪಗಳ ನಿಯಮ 47(2)(XXII) ಅಡಿ ಅವಕಾಶ ನಿರಾಕರಿಸಲಾಗಿದೆ ಎಂದು ಬ್ರಿಟ್ಟಾಸ್ ಬೆಟ್ಟು ಮಾಡಿದ್ದಾರೆ. ಸರಕಾರವು ವಿವಾದಾತ್ಮಕ FCRA ತಿದ್ದುಪಡಿ ಮಸೂದೆಯನ್ನು ಪ್ರಸಾರಿಸುವ ಕೆಲವೇ ವಾರಗಳ ಮುನ್ನ, ಮಾ. 11ರಂದು ತನ್ನ ಇತ್ತೀಚಿನ ಪ್ರಶ್ನೆಯಲ್ಲಿ FCRA ಪೋರ್ಟಲ್‌ ನಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಕ್ಕೆ ಕಾರಣಗಳನ್ನು ಕೋರಿದ್ದರು.

ಎಷ್ಟು ಸಂಸ್ಥೆಗಳು ತಮ್ಮ FCRA ಪರವಾನಿಗೆಗಳನ್ನು ಕಳೆದುಕೊಂಡಿವೆ, ನವೀಕರಣ ನಿರಾಕರಣೆಗೆ ಕಾರಣಗಳೇನು ಇತ್ಯಾದಿಗಳ ಕುರಿತು ಪ್ರಾಥಮಿಕ ವಿಚಾರಣೆಗಳನ್ನು ಸಹ ಕಳೆದ ಎರಡು ವರ್ಷಗಳಲ್ಲಿ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಎಲ್ಲ ಮಾಹಿತಿಗಳನ್ನು 'ವರ್ಗೀಕೃತ ಮಾಹಿತಿ' ಎಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿರುವ ಬ್ರಿಟ್ಟಾಸ್, ತನ್ನ ಇತ್ತೀಚಿನ ಪ್ರಶ್ನೆಗೆ ಅನುಮತಿಸದಿರುವ ಕಾರಣವನ್ನು ಈವರೆಗೂ ತನಗೆ ನೀಡಲಾಗಿಲ್ಲ ಎಂದು ಹೇಳಿದ್ದಾರೆ.

ಪಾರದರ್ಶಕತೆಯೇ ಸ್ವತಃ 'ರಹಸ್ಯ'ವಾದರೆ ಅದಕ್ಕೆ ಉತ್ತರದಾಯಿತ್ವವು ಮೊದಲ ಬಲಿಯಾಗುತ್ತದೆ ಎಂದು ಹೇಳಿರುವ ಬ್ರಿಟ್ಟಾಸ್, ಸಾರ್ವಜನಿಕ ದತ್ತಿಸಂಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿಯಂತ್ರಕ ನಿರ್ಧಾರಗಳಲ್ಲಿ ಸಂಸತ್ತಿಗೆ ಸಹ ಮಾಹಿತಿಗೆ ಪ್ರವೇಶ ನಿರಾಕರಿಸುವಷ್ಟು ಗೋಪ್ಯತೆ ಏನಿದೆ ಎನ್ನುವುದನ್ನು ಪ್ರಶ್ನಿಸಲೇಬೇಕಾಗಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries