ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ಡಿ.ಸಿಯ ಮೇಯರ್ ಹುದ್ದೆಗೆ ತಮಿಳುನಾಡು ಮೂಲದ ರಿನಿ ಸಂಪತ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಈ ಮೂಲಕ ವಾಷಿಂಗ್ಟನ್ ಡಿ.ಸಿ ಮೇಯರ್ ಸ್ಥಾನಕ್ಕೆ ಸ್ಪರ್ಧೆಗಿಳಿದ ದಕ್ಷಿಣ ಏಷ್ಯಾದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
31ರ ಹರೆಯದ ರಿನಿ ಸಂಪತ್ ಅವರು ನಗರದ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಿ ನವ ವಾಷಿಂಗ್ಟನ್ ರೂಪಿಸುವ ಭರವಸೆ ನೀಡಿದ್ದಾರೆ. ಸರಕಾರಿ ಗುತ್ತಿಗೆದಾರೆ ಆಗಿರುವ ರಿನಿ ಸಂಪತ್, ನಾನು ರಾಜಕಾರಣಿ ಅಲ್ಲ. ನನ್ನೊಂದಿಗೆ ಯಾವುದೇ ವಿಶೇಷ ಹಿತಾಸಕ್ತಿಯ ಗುಂಪುಗಳಿಲ್ಲ. ಇದು ನಗರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ ವ್ಯಕ್ತಿಗೆ ಅವಕಾಶ ನೀಡುವ ಸಮಯ ಎಂದು ಹೇಳಿದ್ದಾರೆ.
ತಮಿಳುನಾಡಿನ ಥೇಣಿಯಲ್ಲಿ ಜನಿಸಿದ ರಿನಿ ಸಂಪತ್ 7 ವರ್ಷ ವಿದ್ದಾಗ ಅಮೆರಿಕಕ್ಕೆ ತೆರಳಿದ್ದಾರೆ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ವಾಷಿಂಗ್ಟನ್ ಡಿಸಿಯ ನಿವಾಸಿಯಾಗಿದ್ದಾರೆ.
ವಾಷಿಂಗ್ಟನ್ ಡಿ.ಸಿ ಮೇಯರ್ ಹುದ್ದೆಗೆ ಸಾರ್ವತ್ರಿಕ ಚುನಾವಣೆ ನವೆಂಬರ್ 3ರಂದು ನಡೆಯಲಿದೆ.
ನೀಸ್ ಲೂಯಿಸ್ ಜಾರ್ಜ್, ಕೆನ್ಯನ್ ಮೆಕ್ಡಫಿ, ಗ್ಯಾರಿ ಗುಡ್ವೆದರ್, ರಾಬರ್ಟ್ ಎಲ್ ಗ್ರಾಸ್ ಮತ್ತು ರೋಂಡಾ ಹ್ಯಾಮಿಲ್ಟನ್ ಮೇಯರ್ ಹುದ್ದೆಗೆ ಸ್ಪರ್ಧೆಯಲ್ಲಿದ್ದಾರೆ.

